​ಅಳಪೆಯ ಮಹಿಳೆ ನಾಪತ್ತೆ

Update: 2019-10-31 15:15 GMT

ಮಂಗಳೂರು, ಅ.31: ನಗರದ ಅಳಪೆ ನಿವಾಸಿ ವಸೀಂ ಪಾಷಾ ಎಂಬವರ ಪತ್ನಿ ಮೆಹಕ್ ಫಾತಿಮಾ ಎಂಬವರು ಅ.28ರಂದ ಕಾಣೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೆಹಕ್ ಫಾತಿಮಾ ಅಂದು ಪೂರ್ವಾಹ್ನ 11 ಗಂಟೆಗೆ ತನ್ನ ಅತ್ತೆಯನ್ನು ಅಳಪೆಯಿಂದ ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯ ಬಟ್ಟೆ ಅಂಗಡಿಗೆ ಕರೆದೊಯ್ದು ‘ನೀವು ಇಲ್ಲೇ ಇರಿ. ನಾನು ಟೈಲರ್ ಶಾಪ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ವಾಪಸ್ ಬಂದಿಲ್ಲ. ವಿಷಯ ತಿಳಿದ ವಸೀಂ ಪಾಷಾ ತನ್ನ ಹೆಂಡತಿಯ ಮೊಬೈಲ್ ಗೆ ಕರೆ ಮಾಡಿದಾಗ ತಂದೆ, ಅಣ್ಣನ ಜೊತೆ ಕಾಸರಗೋಡಿಗೆ ಹೋಗುತ್ತಿದ್ದೇನೆ. ರಾತ್ರಿ 12:30 ಗಂಟೆ ಒಳಗೆ ಮನೆಗೆ ಬರುತ್ತೇನೆ ಎಂದು ಹೇಳಿದ್ದರೂ ಮರಳಿ ಬಂದಿಲ್ಲ. ಇದೀಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ನಾಪತ್ತೆಯಾದ ಆಕೆಯನ್ನು ಪತ್ತೆ ಹಚ್ಚಿ ಕೊಡುವಂತೆ ದೂರಲ್ಲಿ ಮನವಿ ಮಾಡಿದ್ದಾರೆ.

24 ವರ್ಷ ಪ್ರಾಯದ ಮೆಹಕ್ ಫಾತಿಮಾ 5.3 ಎತ್ತರವಿದ್ದು, ಬಿಳಿ ಮೈ ಬಣ್ಣ ಹೊಂದಿದ್ದಾರೆ. ಈಕೆಯನ್ನು ಕಂಡವರು ಮಾಹಿತಿ ನೀಡುವಂತೆ ಬಂದರ್ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News