ಮಂಗಳೂರು: ಮಾದಕ ದ್ರವ್ಯ ಜಾಲದ ನಾಲ್ವರ ಸೆರೆ
Update: 2019-10-31 21:51 IST
ಮಂಗಳೂರು, ಅ.31: ಮನುಷ್ಯನ ಜೀವಕ್ಕೆ ಹಾನಿಯಾಗುವಂತಹ ನಿಷೇಧಿತ ಮಾದಕ ವಸ್ತುಗಳಾದ ಕೊಕೇನ್, ಎಂಡಿಎಂಎ, ಚರಸ್, ಎಲ್ಎಸ್‌ಡಿ ಮತ್ತಿತರ ಮಾದಕ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ನಗರದ ಕಾರ್‌ಸ್ಟ್ರೀಟ್ ನಿವಾಸಿಗಳಾದ ಅನಂತ ಕುಡ್ವ, ಗೋಪಿನಾಥ ಗೋಪಿ, ಕಿಶನ್ ಹೆಗ್ಡೆ ಮತ್ತು ಫಳ್ನೀರ್ ನಿವಾಸಿ ಹಬೀಲ್ ಅಹ್ಮದ್ ಎಂಬವರನ್ನು ಪಾಂಡೇಶ್ವರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿಗಳು ಮಾದಕ ದ್ರವ್ಯವನ್ನು ಅಮಾಯಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ನಗರದ ಮೋರ್ಗನ್‌ಗೇಟ್ ಪರಿಸರದಲ್ಲಿ ದಿನವಿಡೀ ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.