×
Ad

ಬೆಳ್ತಂಗಡಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಪ್ರತ್ಯೇಕ ಧ್ವಜ ಹಾರಾಟ!

Update: 2019-11-01 14:32 IST

ಬೆಳ್ತಂಗಡಿ, ನ.1: ತಾಲೂಕಿನ ವಿವಿಧೆಡೆಗಳಲ್ಲಿ ಕನ್ನಡ ರಾಜ್ಯೋತ್ಸವದ ದಿನವಾದ ಶುಕ್ರವಾರ ರಾಷ್ಟ್ರಧ್ವಜ, ಕನ್ನಡ ಧ್ವಜದ ಬದಲು ಅಲ್ಲಲ್ಲಿ ಪ್ರತ್ಯೇಕ ಧ್ವಜಗಳು ಪ್ರತ್ಯಕ್ಷಗೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಎರಡು ಕಡೆ ಪ್ರತ್ಯೇಕ ಧ್ವಜ ಕಾಣಿಸಿಕೊಂಡಿದೆ. ಇದು ತುಳುನಾಡಿನ ಧ್ಜವೆಂದು ಪರಿಚಿತವಾಗಿರುವ ಧ್ವಜವಾಗಿದೆ. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಗೇಟಿನ ಮೇಲೂ ಇದೇ ಧ್ವಜ ಹಾರಾಡುತ್ತಿತ್ತು. ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿರುವ ಧ್ವಜಸ್ತಂಭದಲ್ಲಿದ್ದ ಕನ್ನಡ ಧ್ಜವನ್ನು ಕೆಳಗಿಳಿಸಿ ಈ ‘ತುಳು’ ಬೆಂಬಲಿತ ಧ್ವಜವನ್ನು ಹಾಕಲಾಗಿದೆ. ಈ ಕೃತ್ಯದ ವಿರುದ್ಧ ಸರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಪ್ರತ್ಯೇಕ ಧ್ವಜ ಹಾರಾಟ ಕೃತ್ಯವು ಕಳೆದ ರಾತ್ರಿ ನಡೆದಿದೆ. ಇದೀಗ ಮಾಹಿತಿ ತಿಳಿದ ಕನ್ನಡ ಸಂಘಟನೆಗಳು ಪ್ರತ್ಯೇಕ ಧ್ವಜವನ್ನು ಇಳಿಸಿ ಮತ್ತೆ ಕನ್ನಡ ಧ್ವಜವನ್ನು ಹಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News