×
Ad

ತಾಯಿಂದ ಬೇರ್ಪಟ್ಟ ನವಿಲು ಮರಿಗಳ ರಕ್ಷಣೆ

Update: 2019-11-01 19:48 IST

ಉಡುಪಿ, ನ.1: ತಾಯಿಂದ ಬೇರ್ಪಟ್ಟು ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ಕು ನವಿಲು ಮರಿಗಳನ್ನು ಉಡುಪಿಯ ಸಮಾಜ ಸೇವಕರು ರಕ್ಷಿಸಿ ಅರಣ್ಯ ಇಲಾಖೆಗೆ ಇಂದು ಹಸ್ತಾಂತರಿಸಿದ್ದಾರೆ.

ಉಡುಪಿ ಸುಬ್ರಹ್ಮಣ್ಯ ನಗರ ವಾರ್ಡಿನ ಬಬ್ಬುಸ್ವಾಮಿ ದೇವಸ್ಥಾನ ಬಳಿಯ ಹಾಡಿಯಲ್ಲಿ ನಾಲ್ಕು ನವಿಲು ಮರಿಗಳು ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿದ್ದು, ಈ ಮರಿಗಳು ತಾಯಿ ಮಡಿಲು ಸೇರಬಹುದೆಂದು ಸ್ಥಳಿಯರು ನಿರೀಕ್ಷಿಸಿದರು. ಆದರೂ ತಾಯಿ ನವಿಲಿನ ಸುಳಿವು ಕಾಣದ್ದರಿಂದ ಸ್ಥಳಿಯರಾದ ಜನಾರ್ದನ್ ಮರಿಗಳನ್ನು ಹಿಡಿದು ರಕ್ಷಿಸಿ ಇಟ್ಟಿದ್ದರು.

ನಂತರ ಪಶುವೈದ್ಯ ಡಾ.ಸಂದೀಪ್ ಕುಮಾರ್ ಮೂಲಕ ಮಾಹಿತಿ ಪಡೆದ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ್ ಮೇಸ್ತ ಶಿರೂರು ಸ್ಥಳಕ್ಕೆ ತೆರಳಿ ಅಸಹಾಯಕ ಸ್ಥಿತಿಯಲ್ಲಿರುವ ಮರಿಗಳನ್ನು ಸುರಕ್ಷಿತವಾಗಿ ಪಂಜರದಲ್ಲಿಟ್ಟು, ನಂತರ ಮರಿಗಳನ್ನು ಅರಣ್ಯಾಧಿ ಕಾರಿ ದೇವರಾಜ್ ಪಾಣ ಅವರಿಗೆ ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News