ಹೂಡೆ ಸಾಲಿಹಾತ್ ಶಾಲೆಯಲ್ಲಿ ನೇತ್ರ ತಪಾಸಣಾ ಶಿಬಿರ
ಉಡುಪಿ, ನ.1: ಇಂದ್ರಾಳಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್‌ಗಳ ಆಶ್ರಯ ದಲ್ಲಿ ವಿದ್ಯಾರ್ಥಿಗಳಿಗೆ ನೇತ್ರ ತಪಾಸಣಾ ಶಿಬಿರವು ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಶಿಬಿರವನ್ನು ಉದ್ಘಾಟಿಸಿದ ಇಂದ್ರಾಳಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಋಷಿಕೇಶ ಶೆಟ್ಟಿ ಮಾತನಾಡಿ, ಸಣ್ಣ ಪ್ರಾಯದಲ್ಲಿಯೇ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಬೇಕು. ಮಕ್ಕಳು ಆರೋಗ್ಯವಂತರಾದರೆ ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ.ರಮ್ಯ, ಪ್ರಸಾದ್ ನೇತ್ರಾಲಯದ ಮ್ಯಾನೇಜರ್ ಮಧುಕರ, ಉಡುಪಿ ಜಿಲ್ಲಾ ಲಿಯೋ ಕ್ಲಬ್ ಅಧ್ಯಕ್ಷ ಫೌಜಾನ್ ಅಕ್ರಮ್ ಮೌಲಾ, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಮೀನಾ ನಝೀರ್ ಉಪಸ್ಥಿತರಿದ್ದರು.
ಇಂದ್ರಾಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಎ.ಮೌಲಾ ಸ್ವಾಗತಿಸಿದರು. ಬಳಿಕ ಉಡುಪಿಯ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಗಳಿಂದ ಕಣ್ಣಿನ ತಪಾಸಣೆ ನಡೆಸಲಾಯಿತು.