×
Ad

ಪ್ರತಿಭಾ ಕಾರಂಜಿ: ಸಾಲಿಹಾತ್ ವಿದ್ಯಾರ್ಥಿನಿ ರಾಜ್ಯಮಟ್ಟಕ್ಕೆ ಆಯ್ಕೆ

Update: 2019-11-01 20:01 IST

ಉಡುಪಿ, ನ.1: ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಪ್ರೌಢ ಶಾಲಾ ವಿಭಾಗದಲ್ಲಿ ಹೂಡೆ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜಿಯಾ ಮೆಹ್ವಿಶ್ ಅರಬಿ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದ ಅರೆಬಿಕ್ ಧಾರ್ಮಿಕ ಪಠಣದಲ್ಲಿ ಮುಹಮ್ಮದ್ ಫೈಸಲ್ ಪ್ರಥಮ ಹಾಗೂ ಉರ್ದು ಕಂಠಪಾಠದಲ್ಲಿ ಇಹಾನ್ ಅಹ್ಮದ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News