ಫಲಾಹ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
Update: 2019-11-01 20:24 IST
ಮಂಗಳೂರು, ನ.1: ತಲಪಾಡಿ ವಿದ್ಯಾನಗರದ ಫಲಾಹ್ ವಿದ್ಯಾಸಂಸ್ಥೆಯಲ್ಲಿ 64ನೇ ಕನ್ನಡ ರಾಜ್ಯೋತ್ಸವವು ಆಚರಿಸಲಾಯಿತು. ಈ ಸಂದರ್ಭ 2017-2018 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಫಝೀನಾರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಫಲಾಹ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್, ಕೋಶಾಧಿಕಾರಿ ಅಬ್ಬಾಸ್ ಮಜಲ್, ಮಾಜಿ ಅಧ್ಯಕ್ಷ ಯು.ಬಿ.ಮುಹಮ್ಮದ್, ಮಾಜಿ ಕಾರ್ಯದರ್ಶಿ ಟಿ.ಎಂ. ಬಶೀರ್, ಮಾಜಿ ಕೋಶಾಧಿಕಾರಿ ಇಸ್ಮಾಯೀಲ್ ನಾಗತೋಟ, ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್, ಮುಖ್ಯಶಿಕ್ಷಕರಾದ ಮುಹಮ್ಮದ್ ರಫೀಕ್, ವಿದ್ಯಾ ಡಿಸೋಜ, ಆಯಿಶಾ ಸಬೀನಾ ಕೈಸಿರಾನ್, ಸದರ್ ಮುಅಲ್ಲಿಂ ಮುಸ್ತಫಾ ಕಮಲ್ ಉಪಸ್ಥಿತರಿದ್ದರು.
ಶಿಕ್ಷಕರಾದ ಲತಾ ಪಿ. ಸ್ವಾಗತಿಸಿದರು. ರಕ್ಷಿತಾ ಉದ್ಯಾವರ ವಂದಿಸಿದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು.