×
Ad

ಎಸ್‌ಡಿಪಿಐ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Update: 2019-11-01 21:19 IST

ಮಂಗಳೂರು, ನ.1: ‘ಘನತೆಯ ರಾಜಕೀಯಕ್ಕಾಗಿ ಎಸ್‌ಡಿಪಿಐ ಸೇರಿರಿ’ ಎಂಬ ಘೋಷ ವಾಕ್ಯದೊಂದಿಗೆ ಸೊಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟಾದ್ಯಂತ ನ.1ರಿಂದ 30ರ ತನಕ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನದ ಪ್ರಯುಕ್ತ ದ.ಕ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ಜಿಲ್ಲಾ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭ ಸದಸ್ಯತ್ವ ಅಭಿಯಾನದ ಬಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು. ಪಕ್ಷದ ತತ್ವ ಸಿದ್ದಾಂತ ಮತ್ತು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಝಾಕಿರ್ ಹುಸೈನ್ ಉಳ್ಳಾಲ, ಕಲೀಲ್ ಉಳ್ಳಾಲ, ಅಯ್ಯೂಬ್ ಸೂರಿಂಜೆ, ಲಾನ್ಸಿ ಡಿಸೋಜ, ನಝೀರ್ ತೊಕ್ಕೊಟ್ಟು, ಇರ್ಫಾನ್ ಬಂದರ್, ರಹೀಮ್, ಶಾಫಿ ಬಂದರ್, ಅಶ್ರಫ್ ಟಿ.ಸಿ., ಅರ್ಷದ್ ಕುದ್ರೋಳಿ, ಖಾದರ್ ಕುದ್ರೋಳಿ, ಹನೀಫ್ ಉಳ್ಳಾಲ, ಇಮ್ತಿಯಾಝ್ ಕೋಟೆಪುರ, ಅಶ್ಪಾಕ್ ಉಳ್ಳಾಲ ಮೊದಲಾದವರು ಪಕ್ಷಕ್ಕೆ ಸೇರ್ಪಡೆಗೊಂಡರು.

ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಹೈಲ್ ಖಾನ್, ಜಿಲ್ಲಾ ಸಮಿತಿಯ ಸದಸ್ಯ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News