×
Ad

​ಕುಂದಾಪುರ: ನ.3ರಂದು ಸಮಗ್ರ ಕೃಷಿ ಮಾಹಿತಿ

Update: 2019-11-01 21:40 IST

ಉಡುಪಿ, ನ.1: ಉಡುಪಿ ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ಸಮಗ್ರ ಕೃಷಿ ಮಾಹಿತಿ ಸಭೆ ನ.3ರ ರವಿವಾರ ಅಪರಾಹ್ನ 3:30ಕ್ಕೆ ಕುಂದಾಪುರ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ(ಎಪಿಎಂಸಿ) ಸಭಾಂಗಣದಲ್ಲಿ ನಡೆಯಲಿದೆ.

ಕುಂದಾಪುರದ ಪ್ರಗತಿಪರ ಕೃಷಿಕ ರೊನಾಲ್ಡ್ ಡಿಸೋಜಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕುಂದಾಪುರದ ಹಿರಿಯ ಕೃಷಿಕರಾದ ಕುಷ್ಟಪ್ಪಶೆಟ್ಟಿ ಮತ್ತು ಯು.ಅವನೀತ ಹೊಳ್ಳ ಉದ್ಘಾಟಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ಸುಬ್ರಹ್ಮಣ್ಯ ಶ್ರೀಯಾನ್ ಪೆರಂಪಳ್ಳಿ, ರವೀಂದ್ರ ಪೂಜಾರಿ ಶೀಂಬ್ರ ಮತ್ತು ಮುಖ್ಯ ಅತಿಥಿಗಳಾಗಿ ಹೆರ್ಗ ದಿನೇಶ್ ಶೆಟ್ಟಿ, ರವೀಂದ್ರ ಗುಜ್ಜರಬೆಟ್ಟು ಭಾಗವಹಿಸಲಿದ್ದಾರೆ.

ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಲಾಭದಾಯಕವಾಗಿ ವಿವಿಧ ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತ ಸಮಗ್ರ ಮಾಹಿತಿಯನ್ನು ನೀಡಲಾಗುವುದು ಎಂದು ಜಿಲಾ್ಲ ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News