ನ.2ರಂದು ಫಿಲಾಟೇಲಿ ಕ್ವಿಝ್ ಸ್ಪರ್ಧೆ
Update: 2019-11-01 21:40 IST
ಉಡುಪಿ, ನ.1: ಉಡುಪಿ ಅಂಚೆ ವಿಭಾಗದ ವತಿಯಿಂದ 2019-20ನೇ ಸಾಲಿನ ದೀನ್ ದಯಾಳ್ ಸ್ಪರ್ಶ್ ಯೋಜನೆ ವಿದ್ಯಾರ್ಥಿ ವೇತನಕ್ಕೆ ಸಂಬಂಧಿ ಸಿದ ಫಿಲಾಟೇಲಿ ಕ್ವಿಝ್ ಸ್ಪರ್ಧೆಯನ್ನು ಕುಂದಾಪುರ ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.2ರಂದು ಮಧ್ಯಾಹ್ನ 2:30ರಿಂದ 3:30ರವರೆಗೆ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳು ಶಾಲೆಗೆ ಕಳುಹಿಸಲಾದ ಪ್ರವೇಶ ಪತ್ರದೊಂದಿಗೆ ನಿಗದಿತ ಸಮಯಕ್ಕೆ ಸ್ಪರ್ಧೆಗೆ ಹಾಜರಾಗುವಂತೆ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.