×
Ad

ಹುಸಿ ಬೆಂಕಿ ಎಚ್ಚರಿಕೆ: ಚೆನ್ನೈಗೆ ಮರಳಿದ ಇಂಡಿಗೋ ವಿಮಾನ

Update: 2019-11-01 21:57 IST

ಹೊಸದಿಲ್ಲಿ, ನ.1: ಶುಕ್ರವಾರ ಬೆಳಗಿನ ಜಾವ ಇಂಡಿಗೋದ ಚೆನ್ನೈ-ಕುವೈತ್ ಯಾನವನ್ನು ನಿರ್ವಹಿಸುತ್ತಿದ್ದ ಪೈಟಲ್‌ಗಳು ನಿರ್ಗಮನದ ಬೆನ್ನಲ್ಲೇ ಬೆಂಕಿ ಎಚ್ಚರಿಕೆಯ ಗಂಟೆ ಮೊಳಗಿದ ಬಳಿಕ ತುರ್ತು ಸ್ಥಿತಿಯನ್ನು ಘೋಷಿಸಿದ್ದು,ವಿಮಾನವು ಚೆನ್ನೈ ವಿಮಾನ ನಿಲ್ದಾಣಕ್ಕೆ ವಾಪಸಾಗಿತ್ತು. ಇದೊಂದು ಹುಸಿ ಎಚ್ಚರಿಕೆಯಾಗಿತ್ತು ಎನ್ನುವುದು ನಂತರ ಬೆಳಕಿಗೆ ಬಂದಿದೆ.

 160ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತಿದ್ದ ಎ320 ನಿಯೊ ವಿಮಾನವು ನಸುಕಿನ 1:20ರ ಸುಮಾರಿಗೆ ತನ್ನ ಪ್ರಯಾಣವನ್ನು ಆರಂಭಿಸಿತ್ತು. 15 ನಿಮಿಷಗಳಾಗುವಷ್ಟರಲ್ಲಿ ಬೆಂಕಿ ಎಚ್ಚರಿಕೆಯನ್ನು ಗಮನಿಸಿದ ಪೈಲಟ್‌ಗಳು ಎಲ್ಲ ವಾಯು ಸಂಚಾರ ನಿಯಂತ್ರಣ ಕಚೇರಿಗಳಿಗೆ ತುರ್ತು ಸಂದೇಶವನ್ನು ರವಾನಿಸಿದ್ದರು. ವಿಮಾನದ ಕಾರ್ಗೊ ವಿಭಾಗದಲ್ಲಿಯ ದೋಷಪೂರ್ಣ ಹೊಗೆ ಪತ್ತೆ ಸಾಧನಗಳಿಂದಾಗಿ ಬೆಂಕಿ ಎಚ್ಚರಿಕೆ ಗಂಟೆ ಮೊಳಗಿತ್ತು ಎನ್ನ್ನುವುದು ಬಳಿಕ ಬೆಳಕಿಗೆ ಬಂದಿದೆ.

ನಂತರ ವಿಮಾನವು ಕುವೈತ್‌ಗೆ ಪ್ರಯಾಣಿಸಿದೆ ಎಂದು ಇಂಡಿಗೋ ವಕ್ತಾರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News