ಉಡುಪಿಯಲ್ಲಿ ತುಳುನಾಡ ಧ್ವಜ ಹಾರಾಟ
Update: 2019-11-01 22:08 IST
ಉಡುಪಿ, ನ.1: ಕನ್ನಡ ರಾಜ್ಯೋತ್ಸವ ದಿನವಾದ ಇಂದು ನಗರದ ಶಿರಿಬೀಡು ಎಂಬಲ್ಲಿ ತುಳುನಾಡ ಧ್ವಜ ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕೆಂಪು ಬಣ್ಣದಲ್ಲಿ ಬಿಳಿ ಬಣ್ಣದ ವೃತ್ತಾಕಾರ ಹಾಗೂ ಅರ್ಧ ಚಂದ್ರನ ಆಕೃತಿ ಹೊಂದಿರುವ ತುಳುನಾಡಿನ ಧ್ವಜವನ್ನು ಶಿರಿಬೀಡು ರಸ್ತೆ ಬದಿಯ ಕಂಬಕ್ಕೆ ಕಟ್ಟಿ ಹಾರಿಸಲಾಗಿದೆ. ಈ ಧ್ವಜವನ್ನು ಯಾರು ಹಾಗೂ ಯಾವ ಸಂಘಟನೆಗೆ ಸೇರಿದ ವರು ಹಾರಿಸಿದ್ದಾರೆ ಎಂಬುದು ಈವರೆಗೆ ತಿಳಿದುಬಂದಿಲ್ಲ.