ಸಲ್ಮಾನ್ ಫರಿಸ್ ಗೆ ಮಿಡಿದ ಹೈಲ್ಯಾಂಡ್ ಇಸ್ಲಾಮಿಕ್ ಫಾರಂ
Update: 2019-11-01 23:09 IST
ಮಂಗಳೂರು: ಬಂಟ್ವಾಳ ಪರ್ಲಿಯ ನಿವಾಸಿ ಬಶೀರ್ ಎಂಬವರ ಪುತ್ರ ಸಲ್ಮಾನ್ ಫಾರಿಸ್ (10) ರಕ್ತದ ಕ್ಯಾನ್ಸರ್ ಚಿಕಿತ್ಸೆಗಾಗಿ ಹೆತ್ತವರು ದಾನಿಗಳ ನೆರವನ್ನು ಕೋರಿದ್ದರು. ಮಾಹಿತಿ ಪಡೆದ ಹೈಲ್ಯಾಂಡ್ ಇಸ್ಲಾಮಿಕ್ ಫಾರಂ ಕೇವಲ 3 ದಿನಗಳಲ್ಲಿ ಆರು ಲಕ್ಷ ರೂ. ಸಾಮೂಹಿಕವಾಗಿ ಸಂಗ್ರಹಿಸಿದೆ.
ಇನ್ನು ಕೆಲವೇ ದಿನಗಳಲ್ಲಿ ಹೆತ್ತವರಿಗೆ ಸಂಗ್ರಹವಾದ ಹಣವನ್ನು ನೀಡಲಾಗುವುದು ಅದಲ್ಲದೇ ಸುಮಾರು ಎರಡು ಲಕ್ಷ ರೂ. ವರೆಗೆ ಹೆತ್ತವರಿಗೆ ದಾನಿಗಳು ನೇರವಾಗಿ ನೀಡಿರುವರು ಮತ್ತು ಸದ್ಯ ಚಿಕಿತ್ಸೆಗೆ ಬೇಕಾದ ಮೊತ್ತ ಸಂಗ್ರಹವಾಗಿದೆ ಎಂದು ಹೈಲ್ಯಾಂಡ್ ಇಸ್ಲಾಮಿಕ್ ಫಾರಂ ಕೋಶಾಧಿಕಾರಿ ರಿಝ್ವಾನ್ ಪಾಂಡೇಶ್ವರ್ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಧಿಕ ಬೆಂಬಲ ಮತ್ತು 'ವಾರ್ತಾಭಾರತಿ'ಯ ವರದಿಯು ಇದಕ್ಕೆ ಮುಖ್ಯ ಕಾರಣ ಎಂದು ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ಸಾಜಿದ್ ಎ.ಕೆ ತಿಳಿಸಿದರು.