×
Ad

ಜಮೀಯ್ಯತ್ತುಲ್ ಫಲಾಹ್ ಘಟಕದಿಂದ ವಿದ್ಯಾರ್ಥಿ ವೇತನ ವಿತರಣೆ

Update: 2019-11-02 23:45 IST

ಪುತ್ತೂರು: ಜಮೀಯ್ಯತ್ತುಲ್ ಫಲಾಹ್ ಪುತ್ತೂರು ಘಟಕದ  ಆಶ್ರಯದಲ್ಲಿ ಬಡ, ಅನಾಥ, ನಿರ್ಗತಿಕ, ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರೋಟರಿ ಜಿ.ಎಲ್. ಸಭಾಭವನದಲ್ಲಿ ಶನಿವಾರ ವಿದ್ಯಾರ್ಥಿವೇತನ ವಿತರಿಸಲಾಯಿತು. ದ.ಕ.ಮತ್ತು ಉಡುಪಿ ಜಿಲ್ಲಾ ಜಮೀಯ್ಯತ್ತುಲ್ ಫಲಾಹ್‌ನ ಪುತ್ತೂರು ಘಟಕದ ಸಹಕಾರದಿಂದ ರೂ.1.5 ಲಕ್ಷ ರೂ.ನೀಡಲಾಯಿತು.

ಮುಖ್ಯ ಅತಿಥಿಗಳಾಗಿದ್ದ ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತ್ತುಲ್ ಫಲಾಹ್ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್‌ರವರು ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ ಮುಸ್ಲಿಂ ಜನಾಂಗದಲ್ಲಿ ಶಿಕ್ಷಣ ಜಾಗೃತಿಗಾಗಿ ಜಮೀಯ್ಯತ್ತುಲ್ ಫಲಾಹ್ ಘಟಕ ಕಳೆದ 30 ವರ್ಷಗಳಿಂದ ನಿರಂತರವಾಗಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು, ಇದರಲ್ಲಿ ವಿದ್ಯಾರ್ಥಿ ವೇತನ ಕೂಡ ಒಂದು ಉಪಯುಕ್ತವಾದ ಕರ‍್ಯಕ್ರಮವಾಗಿದೆ ಎಂದರು. 

ದ.ಕ.ಮತ್ತು ಉಡುಪಿ ಜಿಲ್ಲೆಯ 13 ತಾಲೂಕು ಘಟಕದಲ್ಲಿ ಇಂತಹ ಕರ‍್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳಿಗೆ ಉತ್ತೇಜಿಸುವ ಕರ‍್ಯಕ್ರಮವಾಗಿದೆ ಎಂದು ಅವರು ಹೇಳಿದರು. ಜಮೀಯ್ಯತ್ತುಲ್ ಫಲಾಹ್‌ನಿಂದ ವಿದ್ಯಾರ್ಥಿ ವೇತನ ಪಡೆದವರಲ್ಲಿ ಈಗಾಗಲೇ ಹಲವಾರು ಮಂದಿ ಬಹುದೊಡ್ಡ ಎತ್ತರ ಏರಿದವರು ಇದ್ದಾರೆ. ಮುಂದೆ ತಮ್ಮಿಂದಲೂ ಇಂತಹ ಸಮಾಜಮುಖಿ ಕರ‍್ಯಕ್ರಮ ಮೂಡಿ ಬಂದಲ್ಲಿ ಇಡೀ ಸಮಾಜವೇ ಶಿಕ್ಷಣವಂತ ಸಮಾಜವಾಗಿ ಮೂಡಿ ಬರಲಿದೆ ಎಂದು ಅವರು ಹೇಳಿದರು. 

ಉಪನ್ಯಾಸಕರಾಗಿ ಆಗಮಿಸಿದ ಬಂಟ್ವಾಳ ಅನಂತಾಡಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್‌ರವರು ಮಾತನಾಡಿ ಹಿಂದೆ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದೆಂದರೆ ಅದೊಂದು ದೊಡ್ಡ ದುಸ್ಸಾಹವಾಗಿತ್ತು. ಕ್ರಮೇಣ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ತಮ ರೀತಿಯಲ್ಲಿ  ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮುಸ್ಲಿಂ ವಿದ್ಯಾರ್ಥಿಗಳು ಕೇವಲ ಕಲಿತರೆ ಸಾಲದು ಸಮಾಜಕ್ಕೆ ಅಗತ್ಯವಾದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಎಷ್ಟೋ ಮಂದಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಿದ್ದಾರೆ. ಆದರೆ ಪ್ರತಿಯೋರ್ವರು ವಿದ್ಯಾವಂತರಾಗಿ ಸಮಾಜಕ್ಕೆ ಕೊಡುಗೆಗಳನ್ನು ನೀಡಲು ಮುಂದೆ ಬರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಜಮೀಯ್ಯತ್ತುಲ್ ಫಲಾಹ್ ಘಟಕದ ಅಧ್ಯಕ್ಷ ಶೇಖ್ ಜೈನುದ್ದೀನ್‌ರವರು ಸ್ವಾಗತಿಸಿ, ಮಾತನಾಡಿ, ಜಮೀಯ್ಯತ್ತುಲ್ ಫಲಾಹ್ ಪುತ್ತೂರು ಘಟಕದ ಆರಂಭದಿಂದ ಇಲ್ಲಿಯ ತನಕ ವಿದ್ಯಾರ್ಥಿ ವೇತನ ಸಹಿತ ಮತ್ತಿತರ ಶೈಕ್ಷಣಿವಾಗಿ, ಸಾಮಾಜಿಕ ವಾಗಿ ಹಲವಾರು ಕರ‍್ಯಕ್ರಮಗಳು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದ್ದು, ಇದಕ್ಕಾಗಿ ಘಟಕದ ಎಲ್ಲಾ ಸದಸ್ಯರಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಪುತ್ತೂರು ಘಟಕದ ಮಾಜಿ ಅಧ್ಯಕ್ಷ ಎಂ.ಎಂ. ಅಬ್ದುಲ್ ಅಝೀಝ್ ದುವಾ ನೆರವೇರಿಸಿದರು. ಘಟಕದ ಕೋಶಾಧಿಕಾರಿ ನ್ಯಾಯವಾದಿ ಫಝಲ್ ರಹೀಂ ವಂದಿಸಿದರು. ವೇದಿಕೆಯಲ್ಲಿ ಘಟಕದ ಪ್ರಧಾನ ಕರ‍್ಯದರ್ಶಿ ಉಮ್ಮರ್ ಕರಾವಳಿ ಉಪಸ್ಥಿತರಿದ್ದರು.

ಘಟಕದ ಮಾಜಿ ಅಧ್ಯಕ್ಷ, ನ್ಯಾಯವಾದಿ ಕೆ.ಎಂ.ಸಿದ್ದೀಕ್ ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಮಾಜಿ ಅಧ್ಯಕ್ಷರುಗಳಾದ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ಬಿ.ಎ. ಶಕೂರ್ ಹಾಜಿ, ಎಂ.ಎ.ಹುಸೈನ್ ಕೆನರಾ, ಅಬ್ದುಲ್ ರಹಿಮಾನ್ ಅಝಾದ್, ಪದಾಧಿಕಾರಿಗಳಾದ ಇಬ್ರಾಹಿಂ ಸಾಗರ್, ಮುಹಮ್ಮದ್ ಶರೀಫ್ ಮುಕ್ರಂಪಾಡಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಕರೀಮ್ ಸೋಂಪಾಡಿ, ಇಸುಬು ಒಳಮೊಗ್ರು, ಪಿ.ಬಿ.ಹಸೈನಾರ್, ಅಬ್ದುಲ್ ಅಝೀಝ್ ದರ್ಬೆ, ಅಶ್ರಫ್ ಕೊಟ್ಯಾಡಿ, ಅಶ್ರಫ್ ಗೋಳಿಕಟ್ಟೆ, ಅಬೂಬಕರ್ ಮುಳಾರ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News