ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ ಟೀಂ ಚಕ್ರವರ್ತಿ ಕರ್ವೆಲು

Update: 2019-11-03 08:59 GMT

ಉಪ್ಪಿನಂಗಡಿ: ನವೆಂಬರ್ 1ರಂದು 64ನೇ ಕನ್ನಡ ರಾಜ್ಯೋತ್ಸವವನ್ನು ಟೀಂ ಚಕ್ರವರ್ತಿ ಕರ್ವೆಲು ಕ್ಲಬ್ ನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಅಂಗನವಾಡಿ ಸ್ವಚ್ಛಗೊಳಿಸಿ, ಸ್ಥಳೀಯ ಶಾಲಾ ಮಕ್ಕಳಿಗೂ ಮತ್ತು ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸಿ ವಿಭಿನ್ನವಾಗಿ ಆಚರಿಸಲಾಯಿತು.

ಅತಿಥಿಯಾಗಿ ಭಾಗವಹಿಸಿದ್ದ ಉಪ್ಪಿನಂಗಡಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ವಂದನಾ ಕರ್ವೆಲು ಕನ್ನಡದ ಮಹತ್ವದ ಬಗ್ಗೆ ಮಾತನಾಡಿದರು.

ಟೀಂ ಚಕ್ರವರ್ತಿ ಸ್ಥಾಪಕಾಧ್ಯಕ್ಷ ಅಶ್ರಫ಼್, ಪದಾಧಿಕಾರಿಗಳಾದ  ಫಾರೂಕ್ ಪೆರ್ನೆ, ನಝೀರ್, ಹಕೀಂ, ಸತ್ತಾರ್, ಸಲೀಮ್ ಅಬ್ದುಲ್ ರಹಿಮಾನ್, ನೌಫಲ್, ಫಯಾಝ್ ನೆಕ್ಕಿಲಾಡಿ ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು. ಅಶ್ರಫ್ ಅರಬಿ ಕಲ್ಲಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News