×
Ad

ತೊಕ್ಕೊಟ್ಟು ತಾಜುಲ್ ಉಲಮಾ ಜುಮಾ ಮಸ್ಜಿದ್ ನಲ್ಲಿ ಅನುಸ್ಮರಣೆ, ಬುರ್ದಾ ಮಜ್ಲಿಸ್

Update: 2019-11-03 17:22 IST

ಉಳ್ಳಾಲ : ಇತ್ತೀಚೆಗೆ ನಿಧನರಾದ ಮಂಗಳೂರು ಝೀನತ್ ಬಕ್ಷ್ ಯತೀಂ ಖಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಅಝೀಝ್ ಅವರ ಅನುಸ್ಮರಣೆ ತೊಕ್ಕೇೂಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಇಬ್ರಾಹಿಂ ಬಾವ ಹಾಜಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಸಲಾಯಿತು.

ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಸೈಯದ್ ಮುಹಮ್ಮದ್ ಮಿಹ್ರಾಜ್ ಅಲ್ ಹಾದಿ ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಸಲಾಯಿತು ಮತ್ತು ಝೀನತ್ ಬಕ್ಷ್ ಯತೀಂ ಖಾನ ಇದರ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುರ್ರಶೀದ್ ಹಾಜಿ ಪಾಂಡೇಶ್ವರ ಅವರನ್ನು ಸನ್ಮಾನಿಸಲಾಯಿತು. ಉಮ್ರಾ ಯಾತ್ರೆ ಕೈಗೊಳ್ಳಲಿರುವ ಮಸೀದಿ ಮುಅಝ್ಝಿನ್ ಅಬ್ದುಲ್ ಹಮೀದ್ ಉಸ್ತಾದ್ ರಿಗೆ ಬೀಳ್ಕೊಡುಗೆ ಮಾಡಲಾಯಿತು.

ಈ ಸಂದರ್ಭ ಎಸ್ ವೈ ಎಸ್ ಜಿಲ್ಲಾ ಕೇೂಶಾಧಿಕಾರಿ ಹನೀಫ್ ಹಾಜಿ, ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಕನ್ವೀನರ್ ಮುಸ್ತಫ ಮಾಸ್ಟರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಸೈಯದ್ ಖುಬೈಬ್ ತಂಙಳ್, ಎಚ್ ಎಚ್ ಶಫೀಕ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News