ವಾಟ್ಸ್ಯಾಪ್ ಸ್ಪೈವೇರ್ ಮೂಲಕ ಪ್ರಿಯಾಂಕಾ ಫೋನ್ ಹ್ಯಾಕ್: ಕಾಂಗ್ರೆಸ್ ಆರೋಪ

Update: 2019-11-03 13:26 GMT

ಹೊಸದಿಲ್ಲಿ, ನ.3: ಫೋನ್ ಹ್ಯಾಕ್ ಆಗಿರುವ ಸಾಧ್ಯತೆಯಿದೆ ಎಂದು ಎಚ್ಚರಿಸಿ ವಾಟ್ಸಾಪ್‌ನಿಂದ ಪ್ರಿಯಾಂಕಾ ಗಾಂಧಿಗೆ ಸಂದೇಶ ಬಂದಿತ್ತು ಎಂದು ಕಾಂಗ್ರೆಸ್‌ನ ಹೇಳಿಕೆ ತಿಳಿಸಿದೆ.

ಫೋನ್ ಹ್ಯಾಕ್ ಆಗಿರುವ ಬಗ್ಗೆ ಪ್ರಫುಲ್ ಪಟೇಲ್ ಹಾಗೂ ಮಮತಾ ಬ್ಯಾನರ್ಜಿಗೆ ವಾಟ್ಸಾಪ್‌ನಿಂದ ಸಂದೇಶ ಬಂದಿತ್ತು ಎಂಬ ವರದಿಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಇವರಿಬ್ಬರಿಗೆ ಸಂದೇಶ ಬಂದ ಸಂದರ್ಭದಲ್ಲೇ ಪ್ರಿಯಾಂಕಾ ಗಾಂಧಿಗೂ ಸಂದೇಶ ಬಂದಿದೆ ಎಂದು ಹೇಳಿದ್ದಾರೆ.

ಆದರೆ ಸಂದೇಶ ಬಂದ ದಿನದ ಕುರಿತ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News