ಎನ್‌ಆರ್‌ಸಿಯು ಭವಿಷ್ಯಕ್ಕೆ ಬುನಾದಿ, ಅದು ಸದ್ಯದ ದಾಖಲೆಯಲ್ಲ: ಸಿಜೆಐ ಗೊಗೊಯಿ

Update: 2019-11-03 14:00 GMT

ಹೊಸದಿಲ್ಲಿ,ನ.3: ಅಸ್ಸಾಮಿನಲ್ಲಿ ಎನ್‌ಆರ್‌ಸಿಯು ಸದ್ಯದ ದಾಖಲೆಯಲ್ಲ, ಆದರೆ ಅದು ಭವಿಷ್ಯದ ಬುನಾದಿಯಾಗಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ರಂಜನ ಗೊಗೊಯಿ ಅವರು ರವಿವಾರ ಇಲ್ಲಿ ಹೇಳಿದರು.

 ‘ಪೋಸ್ಟ್ ಕೊಲೊನಿಯಲ್ ಅಸ್ಸಾಂ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು ಬೇಜವಾಬ್ದಾರಿಯುತ ವರದಿಗಾರಿಕೆಗಾಗಿ ಕೆಲವು ಮಾಧ್ಯಮ ಸಂಸ್ಥೆಗಳನ್ನು ತರಾಟೆಗೆತ್ತಿಕೊಂಡರು. ಇವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಅಕ್ರಮ ವಲಸಿಗರ ಸಂಖ್ಯೆಯನ್ನು ತಿಳಿದುಕೊಳ್ಳುವ ತುರ್ತು ಅಗತ್ಯವಿತ್ತು ಮತ್ತು ಎನ್‌ಆರ್‌ಸಿಯು ಅದಕ್ಕಾಗಿ ಪ್ರಯತ್ನಿಸಿತ್ತು. ಹೆಚ್ಚೂ ಇಲ್ಲ ,ಕಡಿಮೆಯೂ ಇಲ್ಲ ಎಂದರು.

ಈ ವರ್ಷದ ಆ.31ರಂದು ಪ್ರಕಟಗೊಂಡ ಅಸ್ಸಾಂ ಎನ್‌ಆರ್‌ಸಿಯ ಅಂತಿಮ ಕರಡು 3.30 ಅರ್ಜಿದಾರರ ಪೈಕಿ ಕನಿಷ್ಠ 19 ಲಕ್ಷ ಜನರನ್ನು ಹೊರಗಿಟ್ಟಿದೆ. ಎನ್‌ಆರ್‌ಸಿ ಪ್ರಕ್ರಿಯೆ ಸರ್ವೋಚ್ಚ ನ್ಯಾಯಾಲಯದ ನಿಗಾದಡಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News