×
Ad

ಉಡುಪಿ ತಾಲೂಕ ಮಟ್ಟದ ಭಜನಾ ಕಮ್ಮಟ ಉದ್ಘಾಟನೆ

Update: 2019-11-03 20:09 IST

ಉಡುಪಿ, ನ.3: ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಗ್ರಾಮ ವಿಕಾಸ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಮತ್ತು ಶ್ರೀಮಹಾಮಾಯಾ ಭಜನಾ ಮಂಡಳಿ ಈಶ್ವರನಗರ ಮಣಿಪಾಲ ಇವುಗಳ ಸಹಯೋಗದೊಂದಿಗೆ ಉಡುಪಿ ತಾಲೂಕ ಮಟ್ಟದ ಭಜನಾ ಕಮ್ಮಟ ‘ಭಜನಾ ಸಂಭ್ರಮ್’ ರವಿವಾರ ದೇವಳದ ಭವಾನಿ ಮಂಟಪದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದೇವಳದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ ಮಾತನಾಡಿ, ಹಿಂದಿನ ಸಂಪ್ರದಾಯದಂತೆ ಇಂದು ಮಕ್ಕಳಿಗೆ ಮನೆ ಯಲ್ಲಿ ಭಜನೆ ಹೇಳಿಕೊಡವ ಪದ್ದತಿ ಇಲ್ಲವಾಗಿದೆ. ಇಂತಹ ಭಜನಾ ಕಮ್ಮಟ ದಲ್ಲಿ ಹೆತ್ತವರ ಜೊತೆಯಲ್ಲಿ ಮಕ್ಕಳು ಭಾಗವಹಿಸಿ ನಿತ್ಯ ಜನೆ ಮಾಡಬೇಕು ಎಂದು ತಿಳಿಸಿದರು.

ಭಜನಾ ಕಮ್ಮಟವನ್ನು ಎಂ.ಎಸ್.ಗಿರಿಧರ್ ಬೆಂಗಳೂರು ನಡೆಸಿಕೊಟ್ಟರು. ಶ್ರೀವಿಠೋಭ ಭಜನಾ ಮಂದಿರ ಅಧ್ಯಕ್ಷ ಗೋಪಾಲ್ ಸಿ.ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಗಣೇಶ, ಸುಧೀರ ಹೆಬ್ರಿ, ಜಂಯತ್ ಪಡುಕೆರೆ, ಶಂಕರದಾಸ್ ಚೆಂಡಕಲ್, ಬಾಲಕೃಷ್ಣ ಶೆಟ್ಟಿ ಪೇತ್ರಿ, ಪದ್ಮ ರತ್ನಾಕರ, ಪ್ರಕಾಶ ಕುಲಾಲ್, ಕೃಷ್ಣ ಕೋಟ್ಯಾನ್, ಜಯಕರ ಪೂಜಾರಿ, ಶ್ರೀಕಾಂತ ಪ್ರಭು ಪಳ್ಳಿ, ಶ್ರೀಮಹಾಮಾಯಾ ಭಜನಾ ಮಂಡಳಿ ನಿರ್ದೇಶಕಿ ಮಾಯಾ ಕಾಮತ್ ಉಪಸ್ಥಿತರಿದ್ದರು.

ಉಡುಪಿ ಭಜನಾ ಸಂಗಮದ ಸಂಚಾಲಕ ಎ.ಶಿವಕುಮಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಕಮ್ಮಟದಲ್ಲಿ ಹತ್ತಾರು ಭಜನಾ ತಂಡಗಳು ಭಾಗವಹಿಸಿದ್ದವು. ಸುಮಾರು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಕುಣಿತಾ ಭಜನೆ ನೆಡಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News