×
Ad

ಬ್ಯಾರೀಸ್ ಕಪ್ -2019 : ಐದು ಜೋಡಿಗೆ ಡಬಲ್ಸ್ ಬ್ಯಾಡ್ಮಿಂಟನ್ ಪ್ರಶಸ್ತಿ

Update: 2019-11-03 21:25 IST

ಮಂಗಳೂರು, ನ. 3: ಬ್ಯಾರೀಸ್ ಸ್ಪೋಟ್ಸ್ ಪ್ರಮೋಟರ್ಸ್‌ ವತಿಯಿಂದ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ಯಾರೀಸ್ ಕಪ್ 2019 ಶಟ್ಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಅಂತಿಮ ಡಬಲ್ಸ್ ಪಂದ್ಯದಲ್ಲಿ (ಪುರುಷರ ಮುಕ್ತ ವಿಭಾಗದ ) ಸಫ್ವಾನ್ ಹಾಗೂ ನೌಶಾದ್ ಜೋಡಿ ರೋಚಕ ಪಂದ್ಯದಲ್ಲಿ ರಹ್ಮತ್‌ ಮತ್ತು ಸಬಿ ಅಖ್ತರ್ ಜೋಡಿಯನ್ನು 15-10, 10-15, 11-15 ಅಂಕಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಪಡೆದರು.

ಮೊದಲ ಸುತ್ತಿನಲ್ಲಿ ರಹ್ಮತ್‌ ಮತ್ತು ಸಬಿ ಅಖ್ತರ್ ಜೋಡಿ ಮೇಲುಗೈ ಸಾಧಿಸಿದ್ದರೂ ನಂತರ ಚೇತರಿಸಿಕೊಂಡ ಸಫ್ವಾನ್ ಮತ್ತು ನೌಶಾದ್ ಜೋಡಿ ಎರಡು ನೇರ ಸೆಟ್‌ಗಳಿಂದ ತಮ್ಮ ಪ್ರತಿಸ್ಪರ್ಧಿಗಳ ಮೇಲೆ ಮೇಲು ಗೈ ಸಾಧಿಸಿ, ರಹ್ಮತ್ ಮತ್ತು ಸಬಿ ಅಖ್ತರ್ ಜೊಡಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡರು.

ಇಂದು ಒಟ್ಟು 5 ವಿಭಾಗದಲ್ಲಿ ಪಂದ್ಯ ನಡೆಯಿತು. 75 ಪ್ಲಸ್ ವಿಭಾಗದಲ್ಲಿ ಅಬ್ದುಲ್ ಸಮದ್ ಮತ್ತು ಆರಿಫ್ ಜೋಡಿ ತಸ್ಲಿಮ್ ಮತ್ತು ಸರ್ಫ್ರಾಝ್  ಜೋಡಿಯನ್ನು 15-5, 17-15 ನೇರ ಸೆಟ್‌ಗಳಿಂದ ಸೋಲಿಸಿ ಪ್ರಥಮ ಸ್ಥಾನ ಪಡೆದರು.

85 ಪ್ಲಸ್ ವಿಭಾಗದಲ್ಲಿ ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್‌ ಅಧ್ಯಕ್ಷ ನೂರ್ ಮುಹಮ್ಮದ್ ಮತ್ತು ಹಮೀದ್ ಜೋಡಿ ಕಲೀಲ್ ಮತ್ತು ಅಯ್ಯೂಬ್ ಜೋಡಿಯನ್ನು 7-15, 15-10, 17-15 ಸೆಟ್‌ಗಳಿಂದ ಪರಾಭವಗೊಳಿಸಿ ಪ್ರಥಮ ಸ್ಥಾನ ಪಡೆದರು.

95 ಪ್ಲಸ್ ವಿಭಾಗದಲ್ಲಿ ರಫೀಕ್ ಪೊಕ ಮತ್ತು ಮುಹ್ಮಿನ್ ಜೋಡಿ ಅಬೂಸಾಲಿ ಮತ್ತು ರಫಿಕ್ ಸುಹಾ ಜೋಡಿಯನ್ನು 15-13, 15-13 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು.

100 ಪ್ಲಸ್ ವಿಭಾಗದಲ್ಲಿ ಕೆ.ಎಂ. ಅಬ್ದುಲ್ಲಾ ಮತ್ತು ಅನ್ವರ್ ಜೋಡಿ ಹನೀಫ್ ಕೋಸ್ಟಲ್ ಮತ್ತು ರಫೀಕ್ ಪೊಕಾ ಜೋಡಿಯನ್ನು 15-12, 15-13 ನೇರ ಸೆಟ್‌ಗಳಿಂದ ಪರಾಭವಗೊಳಿಸಿ ಪ್ರಥಮ ಸ್ಥಾನ ಪಡೆದುಕೊಂಡರು.

ಅಂತಿಮ ಪಂದ್ಯಗಳಲ್ಲಿ ಪರಾಭವಗೊಂಡವರು ಬ್ಯಾರೀಸ್ ಕಪ್ ಬ್ಯಾಡ್ಮಿಂಟನ್‌ನ ದ್ವಿತೀಯ ಪ್ರಶಸ್ತಿ ಪಡೆದುಕೊಂಡರು.

ಪ್ರಶಸ್ತಿ ವಿತರಣಾ ಸಮಾರಂಭ

ರವಿವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆಸಿಸಿಐನ ಮಾಜಿ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಎ.ಕೆ.ಗ್ರೂಫ್ ಕಂಪೆನಿಯ ನಿರ್ದೇಶಕ ನೌಶದ್ ಎ.ಕೆ., ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವೆಂಕಟೇಶ್ ಎ.ಎಸ್, ಮೋರ್‌ ಪ್ಲೈ ಆ್ಯಂಡ್ ಡೋರ್ಸ್‌ ಕಣ್ಣೂರು ಅಧ್ಯಕ್ಷ ಮುಹಮ್ಮದ್ ಹರ್ಷದ್, ಸುರಭಿ ಗ್ರೂಪ್ ಆಫ್ ಕನ್ಸರ್ನ್ಸ್‌ ಸಂಸ್ಥೆಯ ಮಾಲಕ ಶಿವಪ್ರಸಾದ್ ಪ್ರಭು, ಸೀವಾಸ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ ಲಿಮಿಟೆಡ್‌ನ ಪ್ರವೀಣ್ ಕುಮಾರ್ ಬಂಗೇರಾ, ಸ್ಪೋರ್ಟ್ಸ್ ಪ್ರಮೋಟರ್ಸ್‌ ಪ್ರತಿನಿಧಿ ಐವನ್ ಪಿಂಟೊ, ಸಲೀಂ ಗಾರ್ಮೆಂಟ್ ವೆಂಚರ್‌ನ ನಿರ್ದೇಶಕ ಹಾರೀಸ್ ಬಿ.ಎ., ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್‌ ಅಧ್ಯಕ್ಷ ನೂರ್ ಮುಹಮ್ಮದ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News