×
Ad

ಅಕ್ರಮ ಮರಳುಗಾರಿಕೆಗೆ ದಾಳಿ

Update: 2019-11-03 21:59 IST

ಶಂಕರನಾರಾಯಣ, ನ.3: ಉಳ್ಳೂರು 74 ಗ್ರಾಮದ ಕಳಿನಜೆಡ್ಡು ವರಾಹಿ ಸರಕಾರಿ ನದಿಯಲ್ಲಿ ನ.2ರಂದು ರಾತ್ರಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಶಂಕರನಾರಾಯಣ ಪೊಲೀಸರು ಮರಳು ಸಹಿತ ಟೆಂಪೊವನ್ನು ವಶಪಡಿಸಿಕೊಂಡಿದ್ದಾರೆ.

ಸಂದೀಪ, ಹರೀಶ್(27), ಶರತ್(24), ಸುನಿಲ್ ಕುಮಾರ್(19), ರೋಹಿತ್ ಶೆಟ್ಟಿ ಎಂಬವರು ನದಿಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿಕೊಂಡು ಟಾಟಾ 407 ಟೆಂಪೋದಲ್ಲಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದಾರೆ.

ಮರಳು ತುಂಬಿದ ಟೆಂಪೋ ಹಾಗೂ ಇತರ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News