×
Ad

ವಚನ ಸಾಹಿತ್ಯದಿಂದ ಕ್ರಾಂತಿ ಸೃಷ್ಟಿ :ಎಸ್.ಎಸ್.ನಾಯಕ್

Update: 2019-11-03 22:27 IST

ಮಂಗಳೂರು, ನ.3: ಎಲ್ಲರಲ್ಲೂ ಪ್ರೀತಿ ಮತ್ತು ವಿಶ್ವಾಸದ ಬೆಸುಗೆ ಬೆಸೆಯಲಿ ಮಾನವನ ಜೀವನ ಮೌಲ್ಯ ಗಟ್ಟಿಗೊಳ್ಳಲಿ ಎನ್ನುವುದು ವಚನಕಾರರ ಆಶಯವಾಗಿತ್ತು. ಬಸವಣ್ಣನವರ ಕಾಲದಲ್ಲಿ ರಚಿತವಾದ ವಚನ ಸಾಹಿತ್ಯ ಪ್ರಕಾರಗಳು ಸಾಮಾಜಿಕ ಮತ್ತು ಕೌಟುಂಬಿಕ, ರಾಜಕೀಯ ವೌಲ್ಯಗಳನ್ನು ಕಟ್ಟಿಕೊಡುವಲ್ಲಿ ಕ್ರಾಂತಿಯನ್ನೇ ಮಾಡಿತು. ಅಹಿಂಸಾ ನೀತಿಯನ್ನು ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದ ವಚನಕಾರರು ನಮಗೆ ಸ್ಪೂರ್ತಿ. ಕನ್ನಡ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಸರಸ್ವತಿಯ ಎರಡು ಆಯಾಮಗಳಾಗಿವೆ ಎಂದು ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್ ನುಡಿದರು.

ಶ್ರೆ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು ಜಂಟಿ ಆಶ್ರಯದಲ್ಲಿ ರವಿವಾರ ನಗರದ ವಿವಿ ಕಾಲೇಜು ಸಭಾಂಗಣದಲ್ಲಿ ಜರುಗಿದ 5ನೇ ವಿಶ್ವಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ-2019 ಹಾಗೂ ಕನ್ನಡ ರಾಜ್ಯೋತ್ಸವ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂಗ್ಲಿಷ್‌ಗಿಂತಲೂ ಕನ್ನಡವು ಅತ್ಯಧಿಕ ಸಮೃದ್ಧಿಯನ್ನು ಒಳಗೊಂಡಿದೆ. ಸದ್ವಿಚಾರ, ಸದಾಶಯ ಸರ್ವ ಧರ್ಮಗಳ ಜೀವಾಳ. ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬದುಕು ಸುಂದರ ಹಾಗೂ ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದು ಎಸ್.ಎಸ್.ನಾಯಕ್ ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರವೀಂದ್ರ ಶೆಟ್ಟಿ ನುಳಿಯಾಲು, ಡಾ.ಸಂಜಯ ಪಂ.ಹೊಸಮಠ, ಚಂದ್ರ ಕೊಲ್ಚಾರು, ಬಿ.ಎಸ್. ತಾಂಡವ ಮೂರ್ತಿ, ಜಯಂತ ನಡುಬೈಲು, ನಿತ್ಯಾನಂದ ಮುಂಡೋಡಿ, ರಾಕೇಶ್ ಕುಮಾರ್, ಭಾಸ್ಕರ ಬಲ್ಯಾಯ, ಸುಂದರ ಗೌಡ ಮಂಡೆಕರ, ಎ.ಚಂದ್ರ ನಲಿಕೆ, ಕೋಟಿಯಪ್ಪ ಪೂಜಾರಿ ಸೇರ, ವಿದ್ಯಾ ರಾಕೇಶ್, ಯಶ್ಚಿತ್ ಕಾಳಂಮನೆ ಅವರಿಗೆ ಸಮಾಜ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಚನ ಸಾಹಿತ್ಯ ಗೋಷ್ಠಿ, ವಚನ ಸಾಹಿತ್ಯದಲ್ಲಿ ಕೃಷಿ, ವಚನಕಾರರ ನಡವಳಿಕೆ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಗೋಷ್ಠಿಗಳು ನಡೆದವು. ತೋನ್ಸೆ ಪುಷ್ಕಲ್ ಕುಮಾರ್ ಅವರಿಂದ ಜಗಜ್ಯೋತಿ ಬಸವಣ್ಣ ಹರಿಕಥೆ ಕಾರ್ಯಕ್ರಮ ಜರುಗಿತು. ಸಮಾರೋಪ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಶ್ರೆದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ನರೇಂದ್ರ ಎಲ್. ನಾಯಕ್, ಸೂರಜ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ್ ರೇವಣ್ಕರ್, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.

ಕರುಣಾಕರ ಬಳ್ಕೂರು ವಂದಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News