ಜೈಶ್, ಎಲ್‌ಇಟಿಯಿಂದ ಈಗಲೂ ಭಾರತಕ್ಕೆ ಬೆದರಿಕೆ: ಅಮೆರಿಕ ವರದಿ

Update: 2019-11-03 17:01 GMT

 ವಾಶಿಂಗ್ಟನ್,ನ.3:ಲಷ್ಕರೆ ತಯ್ಯಬಾ (ಎಲ್‌ಇಟಿ) ಹಾಗೂ ಜೈಶೆ ಮುಹಮ್ಮದ್ (ಜೆಇಎಂ)ಸಂಘಟನೆಗಳು ಈಗಲೂ ಭಾರತಕ್ಕೆ ಬೆದರಿಕೆಯಾಗಿ ಮುಂದುವರಿದಿದೆ ಎಂದು ಅಮೆರಿಕ ತಿಳಿಸಿದೆ. ಲಷ್ಕರೆ ತಯ್ಯಬಾ ಗುಂಪಿಗೆ ನಿಷ್ಠವಾದ ಸಂಘಟನೆಗಳ ಜೊತೆ ನಂಟು ಹೊಂದಿರುವ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿರುವುದಕ್ಕಾಗಿ ಅದು ಪಾಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಶುಕ್ರವಾರ ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದ ‘2018ರಲ್ಲಿ ಭಯೋತ್ಪಾದನೆ ಕುರಿತ ದೇಶವಾರು ವರದಿ’ಯಲ್ಲಿ ಕಪ್ಪುಹಣ ಬಿಳುಪು ಹಾಗೂ ಭಯೋತ್ಪಾದನೆ ನಿಗ್ರಹ ಕುರಿತ ವಿತ್ತೀಯ ಕಾರ್ಯಪಡೆ (ಎಫ್‌ಎಟಿಎಫ್)ರೂಪಿಸಿದ್ದ ಕ್ರಿಯಾ ಯೋಜನೆ ಜಾರಿಗೆ ತರಲು ಪಾಕ್ ಅಧಿಕಾರಿಗಳು ವಿಫಲರಾಗಿದ್ದಾರೆಂದು ಅದು ಹೇಳಿದೆ.

   ಪ್ರಾದೇಶಿಕವಾಗಿ ಕೇಂದ್ರೀತವಾದ ಉಗ್ರಗಾಮಿ ಗುಂಪುಗಳು 2018ರಲ್ಲಿಯೂ ಬೆದರಿಕೆಯಾಗಿ ಉಳಿದಿವೆ. ಪಾಕ್ ಮೂಲದ ಲಷ್ಕರೆ ತಯ್ಯಬಾ ಹಾಗೂ ಜೈಶೆ ಗುಂಪುಗಳು ಭಾರತೀಯ ಹಾಗೂ ಅಫ್ಘಾನ್ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿವೆ.

ಜೆಇಎಂ ಹಾಗೂ ಎಲ್‌ಇಟಿಗಳು ಹಣ ಸಂಗ್ರಹಿಸುವುದನ್ನು, ಉಗ್ರರ ನೇಮಕಾತಿ ಹಾಗೂ ಅವರಿಗೆ ತರಬೇತಿ ನೀಡುವುದನ್ನು ತಡೆಯಲು ಪಾಕ್ ಸರಕಾರ ವಿಫಲವಾಗಿದೆಯೆದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News