ನವೆಂಬರ್ 6 ರಂದು ಪುತ್ತೂರಿನಲ್ಲಿ ಪೆನ್ ಪಾಯಿಂಟ್ ಸ್ನೇಹ ಸಮ್ಮಿಲನ-19
ಪುತ್ತೂರು, ನ.3: 'ಪೆನ್ ಪಾಯಿಂಟ್' ವಾಟ್ಸಾಪ್ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಸ್ನೇಹ ಸಮ್ಮಿಲನ-19 ಕಾರ್ಯಕ್ರಮವು ನವೆಂಬರ್ 6 ರಂದು ಬುಧವಾರ ಪುತ್ತೂರಿನ ಪರ್ಲಡ್ಕದ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯಲಿದೆ.
ಪೆನ್ ಪಾಯಿಂಟ್ ವಾಟ್ಸಾಪ್ ಬಳಗವು ಸ್ನೇಹ ಸಮ್ಮಿಲನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕವಿಗೋಷ್ಟಿ, ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸ್ನೇಹಕೂಟ ನಡೆಯಲಿದೆ.
ಸಮಾರಂಭದ ಪ್ರಾರಂಭದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಾಹಿತಿ, ಪತ್ರಕರ್ತ ಬಶೀರ್ ಅಹ್ಮದ್ ಕಿನ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲದೇ, ವಿವಿಧ ಸಾಮಾಜಿಕ ನಾಯಕರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಕವಿಗೋಷ್ಠಿ ನಡೆಯಲಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಜಲೀಲ್ ಮುಕ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಫ್ವಾನ್ ಸವಣೂರು ನಿರೂಪಣೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಸುಮಾರು 20ರಷ್ಟು ಕವಿಗಳು ಕವನ ವಾಚಿಸಲಿದ್ದಾರೆ. ಕವಿಗೋಷ್ಠಿಯ ಬಳಿಕ 'ಸ್ನೇಹ ಕೂಟ' ಹಮ್ಮಿಕೊಳ್ಳಲಾಗಿದ್ದು, ಸಂಜೆ 5 ಗಂಟೆಯ ವೇಳಗೆ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.