ಜುಗಾರಿ ಆಟವಾಡುತ್ತಿದ್ದ ಆರೋಪದಲ್ಲಿ 16 ಮಂದಿಯ ಸೆರೆ
Update: 2019-11-03 22:40 IST
ಮಂಗಳೂರು, ನ.3: ನಗರದ ಹೊರವಲಯದ ಪಂಜಿಮೊಗರು ಸಮೀಪದ ಉರುಂದಾಡಿಗುಡ್ಡೆ ಎಂಬಲ್ಲಿನ ಅಲೆಕ್ಸ್ ಲೋಬೊ ಎಂಬವರ ಮನೆಯ ಬಳಿಯ ಖಾಲಿ ಜಾಗದಲ್ಲಿ ಜುಗಾರಿ ಆಡುತ್ತಿದ್ದ ಆರೋಪದಲ್ಲಿ 16 ಮಂದಿಯನ್ನು ಕಾವೂರು ಪೊಲೀಸರು ರವಿವಾರ ಬಂಧಿಸಿದ್ದಾರೆ.
ಪರಿಸರದ ನಿವಾಸಿಗಳಾದ ವಿಷುಕುಮಾರ್ ಶೆಟ್ಟಿ, ವಿಜಯ ಕುಮಾರ್ ನಾಯರ್, ಪ್ರಕಾಶ್, ಸಂತೋಷ್ ಡಿಸೋಜ, ರಾಜೇಶ್ ಡಿಸೋಜ, ಶೈಲೇಶ್ ನಾಯರ್, ಅರುಣ್ ಡಿಸೋಜ, ರವಿ, ದಿನೇಶ, ನಾರಾಯಣ ಪೂಜಾರಿ,ಲತೇಶ್ ಪೂಜಾರಿ, ಜೆರಾಲ್ಡ್ ಜಿ.ಎನ್., ಭರತ್ ಹನುಮಂತಪ್ಪ, ರಾಘವೇಂದ್ರ ಮರಿಯಪ್ಪ ಪೂಜಾರಿ, ಮೇಘರಾಜ್ ರುದ್ರಪ್ಪ ಪೂಜಾರಿ, ಅಲೆಕ್ಸ್ ಲೋಬೊ ಬಂಧಿತ ಆರೋಪಿಗಳು.
ಆರೋಪಿಗಳು ಆಟಕ್ಕೆ ಬಳಸಿದ 6,180 ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಾವೂರು ಪೊಲೀಸರು ಗಸ್ತು ತಿರುಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.