ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವತಿಯಿಂದ 'ಮರ್ಹಬಾ ಯಾ ರಬೀಅ್' ಮೀಲಾದ್ ಜಾಥಾ

Update: 2019-11-03 17:24 GMT

ಸುಳ್ಯ, ನ.3: ಪ್ರವಾದಿ ಮುಹಮ್ಮದ್ (ಸ) ರವರ ಜನ್ಮ ದಿನಾಚರಣೆ, ಎ.ಪಿ.ಉಸ್ತಾದರ ಕರ್ನಾಟಕ ಯಾತ್ರೆಯ ಐದನೇ ವರ್ಷದ ಸವಿನೆನಪು ಹಾಗೂ ನ.7 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವತಿಯಿಂದ ಮೊಗರ್ಪಣೆಯಿಂದ ಗಾಂಧಿನಗರದವರೆಗೆ 'ಮರ್ಹಬಾ ಯಾ ರಬೀಅ್' ಮೀಲಾದ್ ಜಾಥಾ ನಡೆಯಿತು.

ಸುನ್ನೀ ಜಂಇಯ್ಯತ್ತುಲ್ ಉಲಮಾ ತಾಲೂಕು ಸಮಿತಿ ಅಧ್ಯಕ್ಷ ಅಸಯ್ಯದ್ ಕುಂಞಿಕೋಯ ಸಅದಿ ತಂಞಳ್ ಹಾಗೂ ಮೊಗರ್ಪಣೆ ಮಸೀದಿಯ ಖತೀಬ್ ಅಹಮ್ಮದ್ ಸಖಾಫಿರವರು ಮಾಂಬಿಳಿ ಮಖಾಂ ಝಿಯಾರತ್ತಿಗೆ ನೇತೃತ್ವ ನೀಡಿ ಧ್ವಜವನ್ನು ಹಸ್ತಾಂತರಿಸಿ ಜಾಥಾಗೆ ಚಾಲನೆ ನೀಡಿದರು. 

ಈ ಸಮಾರಂಭದಲ್ಲಿ ಸುನ್ನೀ ಸಂಘಟನೆಗಳ ನಾಯಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಹಸನ್ ಸಖಾಫಿ ಬೆಳ್ಳಾರೆ, ಯೂಸುಫ್ ಹಾಜಿ ಬಿಳಿಯಾರು, ಎ.ಬಿ.ಅಶ್ರಫ್ ಸಅದಿ, ಅಂದುಂಞಿ ಗೋರಡ್ಕ, ಝೈನುಲ್ ಅಬಿದೀನ್ ತಂಙಳ್ ಜಯನಗರ, ಲತೀಫ್ ಸಖಾಫಿ ಮಾಡನ್ನೂರು, ಲತೀಫ್ ಸಖಾಫಿ ಗೂನಡ್ಕ, ಮಹಮ್ಮದ್ ಆಲಿ ಸಖಾಫಿ ಗೂನಡ್ಕ,  ಸಿದ್ದೀಕ್ ಕಟ್ಟೆಕ್ಕಾರ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ಶಮೀರ್ ಮೊಗರ್ಪಣೆ, ಮೂಸಾ ಪೈಂಬಚ್ಚಾಲ್, ಸಿದ್ದೀಕ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.

ಜಾಥಾದಲ್ಲಿ ಎಸ್‌.ಬಿ.ಎಸ್ ಮದ್ರಸ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ ನಡೆಯಿತು. ಜಾಥಾದ ಕೊನೆಯಲ್ಲಿ ಗಾಂಧಿನಗರ ಪೆಟ್ರೋಲ್ ಪಂಪ್‌ನ ಮುಂಭಾಗ ಹುಬ್ಬುರ್ರಸೂಲ್ ಸಂದೇಶ ಭಾಷಣವು ನಡೆಯಿತು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ ಮುಖ್ಯ ಪ್ರಭಾಷಣ ನಡೆಸಿದರು. ಸುಳ್ಯ ಡಿವಿಷನ್ ಎಸ್ಸೆಸ್ಸೆಫ್‌ ಸಮಿತಿ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆ ವಹಿಸಿದರು. ನ.ಪಂ. ಸದಸ್ಯರುಗಳಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಾಜ್ಯ ಎಸ್ಸೆಸ್ಸೆಫ್ ಕೋಶಾಧಿಕಾರಿ ರವೂಫ್ ಖಾನ್ ಮೂಡುಗೋಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಡಿವಿಷನ್ ಉಪಾಧ್ಯಕ್ಷ ಫೈಝಲ್ ಝುಹರಿ ಸ್ವಾಗತಿಸಿ, ಡಿವಿಷನ್ ಪ್ರ. ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News