×
Ad

ಎಸ್ ಕೆ ಎಸ್ ಎಸ್ ಎಫ್ ಬೆಳ್ತಂಗಡಿ ವಲಯ 'ಕ್ಯಾಂಪಸ್ ಮೀಟ್ 2019'

Update: 2019-11-03 23:53 IST

ಬೆಳ್ತಂಗಡಿ: ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಬಿಸ್ಮಿಲ್ಲಾಹ್ ಕ್ಯಾಂಪೈನ್ ಪ್ರಯುಕ್ತ ಕ್ಯಾಂಪಸ್ ವಿದ್ಯಾರ್ಥಿಗಳ ಸಂಗಮವು ಬೆಳ್ತಂಗಡಿ ದಾರುಸ್ಸಲಾಂ ಖಿಲ್ರ್ ಜುಮಾ ಮಸೀದಿಯಲ್ಲಿ ವಲಯ ಅಧ್ಯಕ್ಷ ನಝೀರ್ ಅಝ್ಹರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಅಬೂಬಕರ್ ರಿಯಾಝ್ ರಹ್ಮಾನಿ ಮುಖ್ಯ ಭಾಷಣ ಮಾಡಿದರು .ಜಿಲ್ಲಾ ಕ್ಯಾಂಪಸ್ ವಿಂಗ್ ಅಧ್ಯಕ್ಷ ಬದ್ರುಧ್ಧೀನ್ ಕುಕ್ಕಾಜೆ, ದಾರುಸ್ಸಲಾಮಿನ ಸಮದ್ ಮಾಸ್ಟರ್ ಮಾತನಾಡಿದರು. ವಲಯ ಉಪಾಧ್ಯಕ್ಷ ಬಶೀರ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು.

ವಲಯ ಕೋಶಾಧಿಕಾರಿ ಶಂಸುದ್ದೀನ್ ದಾರಿಮಿ, ಜಿಲ್ಲಾ ಉಪಾಧ್ಯಕ್ಷ ಹನೀಫ್ ದೂಮಳಿಕೆ, ಬೆಳ್ತಂಗಡಿ ಕ್ಲಷ್ಟರ್ ಅಧ್ಯಕ್ಷ ರಝಾಕ್ ಮುಸ್ಲಿಯಾರ್, ಕಾರ್ಯದರ್ಶಿ ಸಾದಿಖ್ ಕಟ್ಟೆ, ಮುಹಮ್ಮದ್ ಕುದ್ರಡ್ಕ, ರೇಂಜ್ ಅಧ್ಯಕ್ಷ ಅಶ್ರಫ್ ಫೈಝಿ ಪುಂಜಾಲಕಟ್ಟೆ, ಸ್ಥಳೀಯ ಖತೀಬ್ ಅಬ್ಬಾಸ್ ಫೈಝಿ ದಿಡುಪೆ, ಅಬ್ದುಲ್ಲಾ ಪುಂಜಾಲಕಟ್ಟೆ, ಖಾದರ್ ಬಂಗೇರು ಕಟ್ಟೆ, ಆರಿಫ್ ಕಕ್ಕಿಂಜೆ, ಝುಬೈರ್ ಕಕ್ಕಿಂಜೆ, ಲತೀಫ್ ಪಾಂಡವರಕಲ್ಲು, ಮುನೀರ್ ನೆಲ್ಲಿಗುಡ್ಡೆ, ರಝಾಕ್ ಬರೆಮೇಲು ಜಿಲ್ಲಾ ಕ್ಯಾಂಪಸ್ ವಿಂಗ್ ನಾಯಕರಾದ ತಮೀಮ್ , ಕೌಸರ್ ಪುಂಜಾಲಕಟ್ಟೆ, ಸಫ್ವಾನ್ ಬಂಟ್ವಾಳ, ಮುಸ್ತಫಾ ಕಟ್ಟದಪಡ್ಪು ಮುಂತಾದವರು ಉಪಸ್ಥಿತರಿದ್ದರು.

ಬಿಸ್ಮಿಲ್ಲಾ ಕ್ಯಾಂಪೈನ್ ಇದರ ವಿಜಯಕ್ಕಾಗಿ ಪ್ರಯತ್ನಿಸಿದ ರಿಝ್ವಾನ್, ಮುಬಾರಿಷ್, ಮನ್ಸೂರ್, ಅಬ್ದುರ್ರಹ್ಮಾನ್, ಶಬೀಬ್, ತಂಸೀರ್  ಅವರನ್ನು ವಲಯ ಸಮಿತಿ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕ್ಯಾಂಪಸ್ ವಿಂಗ್ ವಲಯ ಸಂಚಾಲಕ ಝೈದ್ ನಡುಬೈಲು ಸ್ವಾಗತಿಸಿದರು. ಕಾರ್ಯದರ್ಶಿ ಸಿರಾಜ್ ಚಿಲಿಂಬಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News