ಮಹಾರಾಷ್ಟ್ರದ 'ಹಿತಾಸಕ್ತಿ'ಗಾಗಿ ಎನ್‌ಸಿಪಿ, ಕಾಂಗ್ರೆಸ್ ಜತೆ ಕೈಜೋಡಿಸುವುದಾಗಿ ಹೇಳಿದ ಶಿವಸೇನೆ

Update: 2019-11-04 05:04 GMT
ಸಂಜಯ್ ರಾವತ್

ಮುಂಬೈ: ಅಧಿಕಾರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಜತೆಗೆ ಸಹಮತ ಸಾಧಿಸಲು ವಿಫಲವಾದ ನಂತರ ಶಿವಸೇನೆ ತಾನು ಮಹಾರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಸರಕಾರ ರಚಿಸಲು ಎನ್‌ಸಿಪಿ, ಕಾಂಗ್ರೆಸ್ ಮತ್ತಿತರರ ಜತೆ ಕೈಜೋಡಿಸುವುದಾಗಿ ಹೇಳಿದೆ. ಶಿವಸೇನೆ ಸಂಸದ ಸಂಜಯ್ ರಾವತ್ ಇಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಿ ಮೊದಲು ಏಕೈಕ ದೊಡ್ಡ ಪಕ್ಷಕ್ಕೆ ಸರಕಾರ ರಚಿಸಲು ಆಹ್ವಾನಿಸಿ ನಂತರ ಇತರ ಪಕ್ಷಗಳಿಗೆ ಅವಕಾಶ ನೀಡುವಂತೆ ಕೇಳಿಕೊಳ್ಳಲಿದ್ದಾರೆಂಬ ಮಾಹಿತಿಯಿದೆ. ಶಿವಸೇನೆಯ ಮುಖ್ಯಮಂತ್ರಿ ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದೂ ಅವರು ತಿಳಿಸಿದರು.

ತಾವೇ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದ ದೇವೇಂದ್ರ ಫಡ್ನವಿಸ್ ಇಂದು ರಾಜಧಾನಿ ದಿಲ್ಲಿಗೆ ತೆರಳಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಸೋಮವಾರ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ  ದಿಲ್ಲಿಯಲ್ಲಿ ಭೇಟಿಯಾಗಲಿದ್ದಾರೆ.

ರವಿವಾರ ಶಿವಸೇನೆ ಮುಖವಾಣಿ ಸಾಮ್ನಾದ ಮುಖಪುಟ ಲೇಖನದಲ್ಲಿ "ಯಾವುದೇ ಬೆಲೆ ತೆತ್ತಾದರೂ ಬಿಜೆಪಿ ಸರಕಾರ ಇರಬಾರದು'' ಎಂಬ ಶೀರ್ಷಿಕೆ ನೀಡಲಾಗಿದೆಯಲ್ಲದೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಮತ್ತು ಎನ್‌ಸಿಪಿ ನಿರ್ಧರಿಸಿವೆ ಎಂದೂ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News