×
Ad

ಮಂಗಳೂರು ಮನಪಾ ಚುನಾವಣೆ: ಅಂತಿಮ ಕಣದಲ್ಲಿ 180 ಅಭ್ಯರ್ಥಿಗಳು

Update: 2019-11-04 20:09 IST

ಮಂಗಳೂರು, ನ.4: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ನಡೆಯುವ ಚುನಾವಣಾ ಕಣದಲ್ಲಿ 180 ಅಭ್ಯರ್ಥಿಗಳು ಉಳಿದುಕೊಂಡಿದ್ದು, ಚುನಾವಣೆಯು ದಿನದಿಂದ ದಿನಕ್ಕೆ ಕಾವೇರುತ್ತಿದೆ.

ಸೋಮವಾರ ನಾಮಪತ್ರಗಳನ್ನು ಹಿಂದೆಗೆದುಕೊಳ್ಳುವ ಕೊನೆಯ ದಿನವಾಗಿತ್ತು. 11 ಅಭ್ಯರ್ಥಿಗಳು ನಾಮಪತ್ರ ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ ಅಂತಿಮವಾಗಿ 180 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಕಾಂಗ್ರೆಸ್-60, ಬಿಜೆಪಿ- 60, ಜೆಡಿಎಸ್- 12, ಸಿಪಿಐ- 1, ಸಿಪಿಎಂ-7, ಎಸ್‌ಡಿಪಿಐ-6, ಜೆಡಿಯು-2, ಡಬ್ಲೂಪಿಐ-3, ಕರ್ನಾಟಕ ರಾಷ್ಟ್ರ ಸಮಿತಿ-2, ಪಕ್ಷೇತರರು- 27 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ 60 ವಾರ್ಡ್‌ಗಳ ಪೈಕಿ 21 ವಾರ್ಡ್‌ಗಳಲ್ಲಿ ನೇರ ಸ್ಪರ್ಧೆ ನಡೆಯಲಿದೆ. ಇನ್ನುಳಿದ 39 ವಾರ್ಡ್‌ಗಳಲ್ಲಿ ಬಹುಕೋನ ಸ್ಪರ್ಧೆಯ ಚುನಾವಣೆ ನಡೆಯಲಿದೆ. 23 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಆರು ವಾರ್ಡ್‌ಗಳಲ್ಲಿ ತಲಾ ಐದು ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News