×
Ad

ನಿತೀಶ್ ಕಟಾರ ಹತ್ಯೆ ಪ್ರಕರಣ: ವಿಕಾಸ್ ಯಾದವ್ ಜಾಮೀನು ಅರ್ಜಿ ತಿರಸ್ಕಾರ

Update: 2019-11-04 21:38 IST

ಹೊಸದಿಲ್ಲಿ, ನ. 4: ನಿತೀಶ್ ಕಟಾರಾ ಹತ್ಯೆ ಪ್ರಕರಣದ ದೋಷಿ ವಿಕಾಸ್ ಯಾದವ್ ಪರೋಲ್ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಕಳೆದ ಹದಿನೇಳುವರೆ ವರ್ಷದಿಂದ ತಾನು ಜೈಲಿನಲ್ಲಿದ್ದೇನೆ. ಆದುದರಿಂದ ಜಾಮೀನಿನಲ್ಲಿ ಬಿಡುಗಡೆ ಮಾಡಬೇಕು ಎಂದು ರಾಜಕಾರಣಿ ಡಿ.ಪಿ. ಯಾದವ್ ಅವರ ಪುತ್ರ ವಿಕಾಸ್ ಯಾದವ್ ಮನವಿಗೆ ಪ್ರತಿಕ್ರಿಯಿಸಿದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ‘‘ನೀವು ಪರೋಲ್ ಪಡೆಯಲು ಹೇಗೆ ಸಾಧ್ಯ?’’ ಎಂದು ಪ್ರಶ್ನಿಸಿತು. ‘‘ನೀವು ಜಾಮೀನು ಪಡೆಯಲು ಏಕೆ ಮತ್ತು ಹೇಗೆ ಅರ್ಹರಾಗಿದ್ದೀರಿ?’’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಪ್ರಶ್ನಿಸಿದ್ದಾರೆ. ಅಲ್ಲದೆ, ಆತ ಅಪರಾಧ ನಿರ್ಣಯದ ವಿರುದ್ಧ ಸಲ್ಲಿಸಿದ ಪರಿಹಾರ ಹಾಗೂ ಪುನರ್ ಪರಿಶೀಲನಾ ಅರ್ಜಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ ಎಂದು ನೆನಪಿಸಿದರು.

ತನ್ನ ಸಹೋದರಿಯೊಂದಿಗೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಯ ಪುತ್ರ ಹಾಗೂ ಉದ್ಯಮಿ ನಿತೀಶ್ ಕಟಾರ ಅವರನ್ನು 2002 ಫೆಬ್ರವರಿ 16 ಹಾಗೂ 17ರ ನಡುವಿನ ರಾತ್ರಿ ವಿವಾಹ ಸಮಾರಂಭದಿಂದ ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ ವಿಕಾಸ್ ಯಾದವ್ ಹಾಗೂ ಆತನ ಸೋದರ ಸಂಬಂಧಿ ವಿಶಾಲ್ ಯಾದವ್ ದೋಷಿಗಳು ಎಂದು ಪರಿಗಣಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News