ಮಂಗಳೂರು ವಿಮಾನ ನಿಲ್ದಾಣದಲ್ಲಿ 9.65 ಲಕ್ಷ ರೂ. ಮೌಲ್ಯದ ಚಿನ್ನ ವಶ
Update: 2019-11-04 21:40 IST
ಮಂಗಳೂರು, ನ. 4: ದುಬೈನಿಂದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಭದ್ರತಾ ಸಿಬ್ಬಂದಿ ಸೋಮವಾರ ಸ್ವಾಧೀನಪಡಿಸಿಕೊಂಡಿದ್ದಾರೆ.
ಸುಮಾರು 9.65 ಲಕ್ಷ ರೂ. ಮೌಲ್ಯದ 252.98 ಗ್ರಾಂ ತೂಕದ ಚಿನ್ನದ ಸಣ್ಣ ಸಣ್ಣ ತುಂಡುಗಳನ್ನು ತಪಾಸಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಮಕ್ಕಳ ಆಟಿಕೆ ವಸ್ತುಗಳಲ್ಲಿ ಚಿನ್ನವನ್ನು ತುಂಡುಗಳನ್ನಾಗಿ ಮಾಡಿ ಸಾಗಾಟಕ್ಕೆ ಯತ್ನಿಸಿದ ಸಂದರ್ಭ ಸಿಬ್ಬಂದಿ ಪ್ರಯಾಣಿಕನಿಂದ ಸೊತ್ತನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.