ಗಾಂಜಾ ಸೇವನೆ: ಐವರು ವಿದ್ಯಾರ್ಥಿಗಳು ವಶಕ್ಕೆ
Update: 2019-11-04 21:56 IST
ಮಣಿಪಾಲ, ನ.4: ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಅ.27ರಂದು ಮಣಿಪಾಲದ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲದ ಹೈ ಪಾಯಿಂಟ್ ಅಪಾರ್ಟ್‌ಮೆಂಟ್ ಬಳಿ ಅಮೋಘ್ ತರಳಿ(19) ಮತ್ತು ಹರ್ಷಿತ್ ರೆಡ್ಡಿ(19) ಹಾಗೂ ಮಣಿಪಾಲದಲ್ಲಿರುವ ಉಡುಪಿ ಆರ್‌ಟಿಓ ಕಚೇರಿ ಬಳಿ ಕೇರಳದ ಗೋಕುಲ್ ಎಸ್.ನಾಯರ್(21), ನೀರಜ್ ಎಸ್.(21), ಬಿಹಾರದ ರಾಹುಲ್ ರಂಜನ್(21) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿದ್ದು ಇವರನ್ನು ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.