ಕೋಳಿ ಅಂಕ: ಮೂವರ ಬಂಧನ
Update: 2019-11-04 22:07 IST
ಕಾರ್ಕಳ, ನ.4: ನೂರಾಳ್‌ಬೆಟ್ಟು ಗ್ರಾಮದ ಪೂಂಜಾಜೆ ಎಂಬಲ್ಲಿ ನ.4 ರಂದು ಬೆಳಗ್ಗೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಕಾರ್ಕಳ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಾಳ ಪೇರಡ್ಕದ ದೇವೇಂದ್ರ ಪೂಜಾರಿ(46), ಮಿಯಾರಿನ ರಮೇಶ್ ನಲ್ಕೆ (22), ಮಾಳ ಚೌಕಿಯ ಪ್ರಕಾಶ್ ದೇವಾಡಿಗ(27) ಬಂಧಿತ ಆರೋಪಿಗಳು. ಇವರಿಂದ 2300ರೂ. ನಗದು, ಮೂರು ಬಾಳು ಮತ್ತು ಮೂರು ಕೋಳಿ ಹುಂಜಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.