×
Ad

ಅಂಚೆ ಜೀವ ವಿಮೆ ಪಾಲಿಸಿ: 2020 ಜನವರಿಯೊಳಗೆ ಪುನರುಜ್ಜೀವನಕ್ಕೆ ಅವಕಾಶ

Update: 2019-11-04 22:19 IST

 ಮಂಗಳೂರು, ನ.4: ಅಂಚೆ ಜೀವ ವಿಮೆ ನಿಯಮಗಳ ಅನ್ವಯ ಪಾಲಿಸಿಗಳು 5 ವರ್ಷಕ್ಕಿಂತ ಹೆಚ್ಚುಕಾಲ ಪ್ರೀಮಿಯಂ ಕಟ್ಟದಿದ್ದಲ್ಲಿ ಆ ಪಾಲಿಸಿಯನ್ನು 2020ನೇ ಜನವರಿ 1ರೊಳಗೆ ಪುನರುಜ್ಜೀವನಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

5 ವರ್ಷಕ್ಕಿಂತ ಜಾಸ್ತಿ ಸಮಯ ಕಟ್ಟದೆ ಇರುವ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು ಡಿಸೆಂಬರ್ 31ರ ಒಳಗಾಗಿ ‘ಉತ್ತಮ ಆರೋಗ್ಯದ ಆರೋಗ್ಯ ಪತ್ರ’ವನ್ನು ಹತ್ತಿರದ ಅಂಚೆ ಕಚೇರಿಯಲ್ಲಿ ನೀಡಿ ಪಾಲಿಸಿಯ ಸೌಲಭ್ಯವನ್ನು ಪಡೆಯಬಹುದು. ಇಲ್ಲದಿದ್ದರೆ ಇಂತಹ ಪಾಲಿಸಿಗಳು ರದ್ದುಗೊಳ್ಳುತ್ತದೆ ಎಂದು ಮಂಗಳೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News