×
Ad

ಐರಾವತ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸಲ್ ಸಾರಿಗೆ ಮೇಲ್ದರ್ಜೆಗೆ

Update: 2019-11-04 22:29 IST

ಉಡುಪಿ, ನ.4:ಕ.ರಾ.ರ.ಸಾ.ನಿಗಮವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಬೆಂಗಳೂರು- ಕುಂದಾಪುರದ ನಡುವೆ ಮಂಗಳೂರು- ಉಡುಪಿ- ಕುಂದಾಪುರ- ಮಣಿಪಾಲ ಮಾರ್ಗದಲ್ಲಿ ಈಗಾಗಲೇ ಐರಾವತ ಕ್ಲಬ್‌ಕ್ಲಾಸ್ ಮಲ್ಟಿಆಕ್ಸಲ್ ಸಾರಿಗೆಯನ್ನು ಓಡಿಸುತಿದ್ದು, ಪ್ರಸ್ತುತ ಈ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ, ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿ ಅಕ್ಸಲ್ ಎ.ಸಿ.ಸ್ಲೀಪರ್ ಸಾರಿಗೆಯನ್ನಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಈ ಸಾರಿಗೆಯು ಬೆಂಗಳೂರಿನಿಂದ ರಾತ್ರಿ 10:10ಕ್ಕೆ ಹೊರಟು ಹಾಸನ- ಮಂಗಳೂರು- ಉಡುಪಿ, ಮಣಿಪಾಲ ಮಾರ್ಗವಾಗಿ ಕುಂದಾಪುರಕ್ಕೆ ಬೆಳಗ್ಗೆ 7:30ಕ್ಕೆ ತಲುಪುತ್ತದೆ ಹಾಗೂ ಮರು ಪ್ರಯಾಣದಲ್ಲಿ ಕುಂದಾಪುರದಿಂದ ರಾತ್ರಿ 8:45ಕ್ಕೆ ಹೊರಟು ಮಣಿಪಾಲ-ಉಡುಪಿ-ಮಂಗಳೂರು ಉಪ್ಪಿನಂಗಡಿ ಸಕಲೇಶಪುರ,ಹಾಸನಮಾರ್ಗವಾಗಿ ಬೆಂಗೂರಿಗೆ ಬೆಳಗ್ಗೆ 6 ಕ್ಕೆ ತಲುಪಲಿದೆ.

ಈ ಸಾರಿಗೆಯು ಬೆಂಗಳೂರಿನಿಂದ ರಾತ್ರಿ 10:10ಕ್ಕೆ ಹೊರಟು ಹಾಸನ- ಮಂಗಳೂರು- ಉಡುಪಿ, ಮಣಿಪಾಲ ಮಾರ್ಗವಾಗಿ ಕುಂದಾಪುರಕ್ಕೆ ಬೆಳಗ್ಗೆ 7:30ಕ್ಕೆ ತಲುಪುತ್ತದೆ ಹಾಗೂ ಮರು ಪ್ರಯಾಣದಲ್ಲಿ ಕುಂದಾಪುರದಿಂದ ರಾತ್ರಿ 8:45ಕ್ಕೆ ಹೊರಟು ಮಣಿಪಾಲ-ಉಡುಪಿ-ಮಂಗಳೂರು ಉಪ್ಪಿನಂಗಡಿ ಸಕಲೇಶಪುರ, ಹಾಸನಮಾರ್ಗವಾಗಿ ಬೆಂಗಳೂರಿಗೆ ಬೆಳಗ್ಗೆ6:00ಕ್ಕೆ ತಲುಪಲಿದೆ. ಈ ಸಾರಿಗೆಗೆ ನಲ್ಲಿ ಅವತಾರ್ ಹಾಗೂ ನಿಗಮದ ಖಾಸಗಿ ಬುಕ್ಕಿಂಗ್  ಕೌಂಟರ್‌ಗಳಲ್ಲಿ www.ksrtc.in  ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News