×
Ad

ಮಂಗಳೂರು: ವ್ಯಕ್ತಿ ಆತ್ಮಹತ್ಯೆ

Update: 2019-11-04 22:34 IST

ಮಂಗಳೂರು: ನಗರದ ಬಲ್ಲಾಳ್‌ಬಾಗ್ ವಿವೇಕನಗರ ನಿವಾಸಿ ಪ್ರಶಾಂತ್ ಎಂ.ಎಸ್.(41) ಎಂಬವರು ಕಿಟಕಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ಪ್ರಶಾಂತ್ ಅವರು ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಹಲವು ದಿನದಿಂದ ಸರಿಯಾದ ಕೆಲಸವಿಲ್ಲದ ಒತ್ತಡದಲ್ಲಿದ್ದರು. ಸೋಮವಾರ ಮದ್ಯಪಾನ ಸೇವಿಸಿ ಮನೆಗೆ ಬಂದ ಇವರು ಬೆಡ್‌ರೂಮಿನ ಒಳಗೆ ಹೋಗಿ ಬಾಗಿಲು ಹಾಕಿದ್ದರು. ತುಂಬಾ ಹೊತ್ತಿನ ಬಳಿಕವೂ ಬಾಗಿಲು ತೆರೆಯದಿದ್ದಾಗ ಅವರ ಮಕ್ಕಳು ಬೊಬ್ಬೆ ಹಾಕಿದ್ದಾರೆ. ಕೂಡಲೇ ಪ್ರಶಾಂತ್ ಅವರ ಅಣ್ಣ ಬಾಗಿಲು ಮುರಿದು ಒಳಪ್ರವೇಶಿಸಿ ನೋಡಿದಾಗ ಪ್ರಶಾಂತ್ ಅವರು ಕಿಟಕಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಅವರನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾರೂ ಯಾವುದೇ ಪ್ರಯೋಜನವಾಗಲಿಲ್ಲ.

ಪ್ರಶಾಂತ್ ಅವರಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News