ಭಾರತವಿಲ್ಲದೆ ಒಪ್ಪಂದಕ್ಕೆ ಆರ್‌ಸಿಇಪಿ ಸದಸ್ಯ ರಾಷ್ಟ್ರಗಳು ಸಿದ್ಧ: ಚೀನಾ

Update: 2019-11-04 17:14 GMT

ಬ್ಯಾಂಕಾಕ್,ನ.4: ಆಸಿಯಾನ್ ಸೇರಿದಂತೆ 16 ರಾಷ್ಟ್ರಗಳು ಆರ್‌ಸಿಇಪಿ ಒಪ್ಪಂದದ ಕುರಿತು ಸಹಮತಕ್ಕೆ ಬಂದಿವೆ, ಆದರೆ ಕೆಲವು ವಿವರಗಳನ್ನು ಇನ್ನಷ್ಟೇ ಬಗೆಹರಿಸಿಕೊಳ್ಳಬೇಕಿದೆ. ಮುಂದಿನ ವರ್ಷ ವಿಯೆಟ್ನಾಮ್‌ನ ಆಸಿಯಾನ್ ಅಧ್ಯಕ್ಷತೆಯಡಿ ಒಪ್ಪಂದಕ್ಕೆ ಸಹಿ ಹಾಕುವ ಯೋಜನೆಯನ್ನು ಹೊಂದಲಾಗಿತ್ತು ಎಂದು ಥೈಲ್ಯಾಂಡ್‌ನ ವಾಣಿಜ್ಯ ಸಚಿವ ಜುರಿನ್ ಲಕ್ಸಾನಾವಿಸಿಟ್ ಅವರು ಸೋಮವಾರ ಹೇಳಿದರೆ,ತನ್ನ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮರಕ್ಕೆ ಹೊಸ ಪ್ರಚೋದನೆಯನ್ನು ನೀಡಿರುವ ಆರ್‌ಸಿಇಪಿಯ ಪ್ರಮುಖ ಪ್ರತಿಪಾದಕ ರಾಷ್ಟ್ರವಾಗಿರುವ ಚೀನಾ,ಶಂಕೆಗಳನ್ನು ವ್ಯಕ್ತಪಡಿಸಿರುವ ಭಾರತವನ್ನು ಹೊರಗಿಟ್ಟು ಒಪ್ಪಂದವನ್ನು ಅಂತಿಮಗೊಳಿಸಲು ಇತರ 15 ರಾಷ್ಟ್ರಗಳು ನಿರ್ಧರಿಸಿವೆ.

ಒಪ್ಪಂದಕ್ಕೆ ಸೇರಲು ಅವಕಾಶಗಳನ್ನು ಭಾರತಕ್ಕೆ ಮುಕ್ತವಾಗಿರಿಸಲಾಗುವುದು ಎಂದು ತಿಳಿಸಿದೆ. ಭಾರತವನ್ನು ಬಿಟ್ಟು ಮುಂದುವರಿಯಲು 15 ರಾಷ್ಟ್ರಗಳು ನಿರ್ಧರಿಸಿವೆ.

ಮಾತುಕತೆಗಳು ಪೂರ್ಣಗೊಂಡಿವೆ ಮತ್ತು ಮಾರುಕಟ್ಟೆ ಪ್ರವೇಶದ ವಿಷಯಗಳನ್ನು ಒಪ್ಪಂದದಲ್ಲಿ ಸೇರಿಸಲಾಗಿದೆ. ಭಾರತವು ತನಗೆ ಬೇಕಾದಾಗ ಒಪ್ಪಂದಕ್ಕೆ ಸಹಿ ಹಾಕಬಹುದು ಎಂದು ಚೀನಾದ ಉಪ ವಿದೇಶಾಂಗ ಸಚಿವ ಲೀ ಯುಚೆಂಗ್ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News