ಸಾಮಾಜಿಕ ಕಳಕಳಿಯ ಸ್ಮೈಲ್ ಫೌಂಡೇಶನ್ ಕುಳಾಯಿ ವತಿಯಿಂದ ರಕ್ತದಾನ ಶಿಬಿರ
ಮಂಗಳೂರು : ಸ್ಮೈಲ್ ಫೌಂಡೇಶನ್ ಕುಳಾಯಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಕಂಕನಾಡಿ, ಇದರ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಇದರ ಸಭಾಂಗಣದಲ್ಲಿ ಜರುಗಿತು.
ಕಳೆದ ಎರಡು ವರ್ಷಗಳಿಂದ ಸಾಮಾಜಿಕ ರಂಗದಲ್ಲಿ ನೊಂದವರ ಪಾಲಿನ ಆಶಾಕಿರಣವೆಂಬಂತೆ ಸದಾ ಸೇವೆಯಲ್ಲಿರುವ, ಬಡವರ ಪಾಲಿನ ಚೈತನ್ಯ, ಅಸಾಹಯಕರ ಮುಖದಲ್ಲಿ ನಗೆಯ ಸಿಂಚನವನ್ನು ಬಿತ್ತರಿಸಿದ ಸ್ಮೈಲ್ ಫೌಂಡೇಶನ್ ಕುಳಾಯಿ ತನ್ನ ದ್ವಿತೀಯ ವಾರ್ಷಿಕೋತ್ಸವವನ್ನು ಜೀವದಾನಿಗಳನ್ನು ಸಂಗಮಗೊಳಿಸುವ ರಕ್ತದಾನ ಶಿಬಿರ ಆಯೋಜಿಸುವುದರೊಂದಿಗೆ ವಿಶಿಷ್ಟವಾಗಿಯೇ ಆಚರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಣೇಶ್ ಹೊಸಬೆಟ್ಟು ಮಾಜಿ ಮೇಯರ್ ಮಂಗಳೂರು ಮಹಾನಗರ ಪಾಲಿಕೆ, ಆದರ್ಶ್ ಶೆಟ್ಟಿ ಮ್ಯಾನೆಜಿಂಗ್ ಡೈರೆಕ್ಟರ್ ಭಾರತಿ ಎಜುಕೇಶನ್ ಟ್ರಸ್ಟ್ ಕುಳಾಯಿ, ಮುಹಮ್ಮದ್ ರಫೀಕ್ ಅಧ್ಯಕ್ಷರು ಬದ್ರಿಯಾ ಜುಮ್ಮಾ ಮಸೀದಿ ಕುಳಾಯಿ, ಸ್ಟೈನಿ ಅಲ್ ಮೆಡ ಉಪಾಧ್ಯಕ್ಷರು ಫಾತಿಮ ಮಂದಿರ್ ಕುಳಾಯಿ, ಮಾಜಿ ಸೈನಿಕರಾದ ಭಾಸ್ಕರ್ ರೈ ಹಾಗೂ ಪ್ರವೀಣ್ ಶೆಟ್ಟಿ, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಸ್ಥಳೀಯ ಸಮಾಜ ಸೇವಕರಾದ ಜ್ಯೂಸ್ ಮ್ಯಾಜಿಕ್ ದೇರಳಕಟ್ಟೆಯ ಮಾಲಕರಾದ ಸಾಜಿದ್ ಕುಳಾಯಿ, ದಿನೇಶ್ ಕುಲಾಲ್ ಅಧ್ಯಕ್ಷರು ಅಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಕುಳಾಯಿ, ಮುಹಮ್ಮದ್ ಶಿಪ್ರಾನ್ ಸ್ಥಾಪಕರು ಸ್ಮೈಲ್ ಫೌಂಡೇಶನ್ ಕುಳಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಮೈಲ್ ಫೌಂಡೇಶನ್ ಕುಳಾಯಿ ಇದರ ಅಧ್ಯಕ್ಷರಾದ ಅಫ್ತಾಬ್ ಕುಳಾಯಿ ಅಧ್ಯಕ್ಷತೆ ವಹಿಸಿದ್ದರು.
ಸ್ಮೈಲ್ ಫೌಂಡೇಶನ್ ಕುಳಾಯಿ ಇದರ ಕಾರ್ಯ ನಿರ್ವಾಹಕರಾದ ಸಲ್ಮಾನ್ ಕುಳಾಯಿ ಅವರು ಸ್ವಾಗತಿಸಿ ವಂದಿಸಿದರು..
ಈ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯನಿರ್ವಾಹಕರಾದ ಸಲಾಂ ಚೆಂಬುಗುಡ್ಡೆ ಹಾಗೂ ಊರ ನಾಗರಿಕರು ಹಾಗೂ ಒಟ್ಟು 50ಕ್ಕೂ ಹೆಚ್ಚು ರಕ್ತದಾನಿಗಳು ಉಪಸ್ಥಿತರಿದ್ದರು.