×
Ad

ಶಿಕ್ಷಣದಿಂದ ಸಮಾಜದ ಸಬಲೀಕರಣ ಸಾಧ್ಯ : ಶೈಖುನಾ ಆಲಿ ಕುಟ್ಟಿ ಉಸ್ತಾದ್

Update: 2019-11-04 22:49 IST

ಒಡಿಸ್ಸಾ : ಸಮುದಾಯದ ಸಬಲೀಕರಣಕ್ಕಾಗ ಸುಶಿಕ್ಷಿತ ಸಮಾಜ ಕಟ್ಟುವುದು ಅಗತ್ಯ ಅದಕ್ಕಾಗಿ, ಧರ್ಮದ ಪರಂಪರಾಗತ ಸುನ್ನೀ ತತ್ವಾದರ್ಶದಡಿ ನಾವು ಒಗ್ಗೂಡಿ ಕಾರ್ಯಪ್ರವೃತರಾಗಬೇಕು  ಎಂದು  ವಿದ್ವಾಂಸ, ಉಲಮಾ ಸಂಘಟನೆ 'ಸಮಸ್ತ' ದ ಪ್ರಧಾನ ಕಾರ್ಯದರ್ಶಿ  ಶೈಖುನಾ ಆಲಿ ಕುಟ್ಟಿ ಉಸ್ತಾದ್ ಹೇಳಿದರು.

ಅವರು  ಒಡಿಸ್ಸಾದ ಭರ್ದಕ್ ನಲ್ಲಿ ಮುಫ್ತಿ ಅಹ್ಝಮ್  ಸಯ್ಯದ್ ಅಬ್ದುಲ್ ಖುದ್ದ್ ಸ್ (ರ ಅ) ರವರ 25ನೇ ಉರೂಸ್  ಪ್ರಯುಕ್ತ ನಡೆದ ಅಂತರಾಷ್ಟ್ರೀಯ ಸುನ್ನೀ ಕಾನ್ಫರೆನ್ಸ್ ಮತ್ತು ಶೈಕ್ಷಣಿಕ ಸಮಾವೇಶವನ್ನು ಉದ್ದೇಶಿಸಿ  ಮಾತನಾಡುತ್ತಿದ್ದರು.

ಪ್ರಸಿದ್ಧ ಜಾಗತಿಕ ಉಲಮಾ ನಾಯಕರು ಭಾಗವಹಿಸಿದ್ದ ಈ ಸಮಾವೇಶದಲ್ಲಿ ಒಡಿಸ್ಸಾ ಮುಫ್ತಿ ಸಯ್ಯದ್ ಆಲೆ ರಸೂಲ್,  ಖಮರೇ ಮಿಲ್ಲತ್ ಉಮರ್ ರಝ ಖಾನ್ ಬರೇಲ್ವಿ, ತಸಲೀಂ ರಝ ಖಾನ್ ಬರೇಲ್ವಿ, ಅಬ್ದುಲ್ ಸತ್ತಾರ್ ಹಮ್ ದಾನಿ ಗುಜರಾತ್, ಮುಫ್ತಿ ಅಮಲಿಕು ಝ್ಅಫೇರ್ ಬಿಹಾರ್, ಡಾ. ಅನ್ವರ್ ಅಹ್ಮದ್ ಬಗ್ದಾದಿ, ಹಜ್ರತ್ ಅಲ್ಲಾಮಾ ಸಗೀರ್ ಅಹ್ಮದ್ ಜೋಗಾನ್ಪೂರಿ, ವಿದೇಶದಿಂದ ಸಯ್ಯದ್  ಅಹಮದ್ ಮಮ್ದೂಹ್ ಅಲ್ ಮುವಕ್ಕಿರ್ ಮಿಸ್ರ್ ಈಜಿಫ್ತ್, ಅಲಿ ಮಹಮೂದುಲ್ ಅರಬಿ ಅಸ್ಸರೀಫ್ ಬಾಗ್ದಾದ್,  ಡಾ.ಜಾಹ್ಫರ್ ಹುಸೈನಿ ಮದೀನಾ ಶರೀಫ್, ಡಾ.ಫೈದ್ ಸೈದ್ ಹುಸೈನಿ ಲಂಡನ್, ಮಹಮೂದ್ ಫರಗುಲ್ ಖಾದ್ರಿ ಲಂಡನ್, ಕರ್ನಾಟಕದಿಂದ ಸಮಸ್ತ ವಿದ್ಯಾಭ್ಯಾಸ ಬೋರ್ಡ್  ಸದಸ್ಯ ರಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ರೆಹಮಾನ್ ದಾಹಿ ಬೆಂಗಳೂರು ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News