ದುಬೈ: ಕೆ.ಸಿ.ಎಫ್ ವತಿಯಿಂದ ಕನ್ನಡ ರಾಜ್ಯೋತ್ಸವ

Update: 2019-11-04 17:22 GMT

ದುಬೈ:  ಕರ್ನಾಟಕ ಕಲ್ಚರಲ್ ಫೌಂಡೇಶನ್ ( ಕೆಸಿಎಫ್) ದುಬೈ ನೋರ್ತ್ ಝೋನ್  ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷ  ಇಸ್ಮಾಯಿಲ್ ಮದನಿ ನಗರ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಸಾಹಿತ್ಯ ನೀಡಿದ ಕೊಡುಗೆಯನ್ನು ನೆನಪಿಸಿದರು.

ಮುಖ್ಯಭಾಷಣ ಮಾಡಿದ ಸಂಘಟನಾಧ್ಯಕ್ಷ ರಿಯಾಝ್ ಕೊಂಡಂಕೇರಿ ಕನ್ನಡ ನಾಡಿನ ಸೌರ್ಹಾದತೆ ಮತ್ತು ಸಿರಿವಂತೆ ಪರಂಪರೆಯ ಬಗ್ಗೆ ಬೆಳಕು ಚೆಲ್ಲಿದರು. ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಮುಸಾ ಹಾಜಿ ಬಶರ,  ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ರಫೀಕ್ ಚಾಮಿಯಾಲ್, ಹಮೀದ್ ಚಾಮಿಯಾಲ್, ಹುಸೈನ್ ಸತ್ತಿಕಲ್ ಮೊದಲಾದವರು ವೇದಿಕೆಯಲ್ಲಿದ್ದರು.

ಹಂಝ ಎರ್ಮಾಡ್ ಸ್ವಾಗತಿಸಿ,  ಅಬ್ದುಲ್ ಅಝೀಝ್ ಲತೀಫೀ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News