ಮುರ್ಡೇಶ್ವರ ಲಯನ್ಸ್ ಕ್ಲಬ್ ನಿಂದ ಆರೋಗ್ಯ ತಪಾಸಣಾ ಶಿಬಿರ

Update: 2019-11-04 17:26 GMT

ಭಟ್ಕಳ: ಲಯನ್ಸ್ ಕ್ಲಬ್ ಮುರ್ಡೇಶ್ವರ ಹಾಗೂ ಲಯನ್ಸ್ ಕ್ಲಬ್ ಕಲ್ಯಾಣಪುರಗಳ ಸಂಯುಕ್ತ ಆಶ್ರಯದಲ್ಲಿ ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ  ರವಿವಾರ ನಡೆಯಿತು.

ಈ ವೇಳೆ 50ಕ್ಕೂ ಹೆಚ್ಚು ರೈಲ್ವೆ ಇಲಾಖೆಯ ಸಿಬ್ಬಂದಿಗಳು, ರೈಲು ನಿಲ್ದಾಣದ ಆಟೋ ಚಾಲಕರು ಹಾಗೂ ಶಿಬಿರಾರ್ಥಿಗಳ ಮಧುಮೇಹ ಪರೀಕ್ಷೆ, ಕೊಲೆಸ್ಟಾçಲ್ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಹಾಗೂ ಇ.ಸಿ.ಜಿ ಪರೀಕ್ಷೆಗಳನ್ನು ಉಚಿತವಾಗಿ ನಡೆಸಿ ಔಷಧಿಗಳನ್ನು ವಿತರಿಸಲಾಯಿತು.

ಕಲ್ಯಾಣಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪಿ.ಎ ಭಟ್ ಮಾತನಾಡಿ, ಇಂದಿನ ಪೀಳಿಗೆಗೆ ಆರೋಗ್ಯದ ಕುರಿತು ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ಮಧುಮೇಹ ಹಾಗೂ ಕೊಲೆಸ್ಟಾçಲ್ ಇಂದು ಎಲ್ಲರನ್ನೂ ಕಾಡುವ ಕಾಯಿಲೆಯಾಗಿದೆ. ಆರೋಗ್ಯದ ಕುರಿತ ನಿರ್ಲಕ್ಷ ಮುಂದೆ ನಮ್ಮ ಜೀವನವನ್ನು ಹಾಳುಮಾಡುತ್ತದೆ ಎಂಬುದನ್ನು ತಮ್ಮ ವೈದ್ಯಕೀಯ ಜೀವನದ ಹಲವಾರು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದರು. ಮುರ್ಡೇಶ್ವರ ಲಯನ್ಸ್ ಕ್ಲಬ್ ಡಾ. ಸುನೀಲ್ ಜತ್ತನ್ ಮಾತನಾಡಿ, ಸಮಾಜಸೇವೆಯಲ್ಲಿ ಸದಾ ಮುಂದಿರುವ ಲಯನ್ಸ್ ಕ್ಲಬ್‌ಗಳಿಂದ ಆಗುತ್ತಿರುವ ಸೇವೆಗಳ ಮಾಹಿತಿ ನೀಡಿ ಇಂತಹ ಶಿಬಿರಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. 

ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರಾಮದಾಸ ಶೇಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ ಸದಸ್ಯ ಪಾಂಡುರಂಗ ಅಳ್ವೆಗದ್ದೆ ವಂದಿಸಿದರು. ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. 

ಡಾ. ನಿಶಾಂಕ ಶೆಟ್ಟಿಗಾರ, ಡಾ. ರವೀಂದ್ರ, ಡಾ. ಆಯ್.ಆರ್ ಭಟ್, ಡಾ. ವಾಧಿರಾಜ ಭಟ್, ಡಾ. ಹರಿಪ್ರಸಾದ ಕಿಣಿ, ಡಾ. ಮನೋಜ ಆಚಾರ್ಯ ಮೊದಲಾದ ಪರಿಣಿತ ವೈದ್ಯರು ಹಾಜರಿದ್ದು ಶಿಬಿರಾರ್ಥಿಗಳನ್ನು ತಪಾಸಿಸಿ ಸಲಹೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News