ಕಂಟೇನರ್‌ನಲ್ಲಿ 39 ಶವಗಳ ಪತ್ತೆ: ವಿಯೆಟ್ನಾಮ್ ಪೊಲೀಸರಿಂದ 8 ಮಂದಿ ಬಂಧನ

Update: 2019-11-04 17:48 GMT

ಹನೋಯಿ (ವಿಯೆಟ್ನಾಮ್), ನ. 4: ಕಳೆದ ತಿಂಗಳು ಲಂಡನ್ ಸಮೀಪದ ಟ್ರಕ್ಕೊಂದರ ಕಂಟೇನರ್ ನಲ್ಲಿ 39 ಶವಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ವಿಯೆಟ್ನಾಮ್ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ ಎಂದು ಸರಕಾರಿ ಮಾಧ್ಯಮ ಸೋಮವಾರ ವರದಿ ಮಾಡಿದೆ.

ಅಕ್ಟೋಬರ್ 23ರಂದು ಕಂಟೇನರ್‌ನ ಒಳಗೆ 39 ಶವಗಳು ಪತ್ತೆಯಾಗಿದ್ದವು. ಘಟನೆಗೆ ಸಂಬಂಧಿಸಿ ಬ್ರಿಟಿಶ್ ಪೊಲೀಸರು ಕಳೆದ ವಾರ ಇಬ್ಬರ ವಿರುದ್ಧ ನರಹತ್ಯೆಯ ಆರೋಪ ಹೊರಿಸಿದ್ದಾರೆ.

‘‘ಶಂಕಿತರಿಂದ ಪಡೆದ ಮಾಹಿತಿಗಳ ಆಧಾರದಲ್ಲಿ, ಬ್ರಿಟನ್‌ಗೆ ಅಕ್ರಮವಾಗಿ ಜನರನ್ನು ಸಾಗಿಸುವ ಗುಂಪುಗಳನ್ನು ಸದೆಬಡಿಯಲು ನಾವು ಸಕ್ರಿಯವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’’ ಎಂದು ವಿಯೆಟ್ನಾಮ್‌ನ ನಗೆ ಆನ್ ಪ್ರಾಂತದ ಪೊಲೀಸು ಮುಖ್ಯಸ್ಥರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News