ಉಡುಪಿ: ಮದ್ಯ ಮಾರಾಟ ನಿಷೇಧ ಆದೇಶ ಹಿಂತೆಗೆತ
ಉಡುಪಿ, ನ.5: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಡುಪಿ ತಾಪಂನ 4ನೇ ಬಾರಕೂರು ಕ್ಷೇತ್ರ ತಾಲೂಕು ಪಂಚಾಯತ್‌ನಲ್ಲಿ ಹಾಗೂ ಕಾಪು ತಾಲೂಕು ಕಟಪಾಡಿ, ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ, ಕಾರ್ಕಳ ತಾಲೂಕಿನ ಮುಂಡ್ಕೂರು ಹಾಗೂ ಕಲ್ಯಾ ಗ್ರಾಪಂಗಳ ವ್ಯಾಪ್ತಿಯಲ್ಲಿ ನ.12ರಂದು ಉಪಚುನಾವಣೆ ನಡೆಯಲಿದ್ದು, ಈ ಎಲ್ಲಾ ಗ್ರಾಪಂಗಳ ಹಾಗೂ ಬಾರಕೂರು ತಾಪಂ ವ್ಯಾಪ್ತಿ ಯಲ್ಲಿ ಅ.28ರಿಂದ ನ.14ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಎಲ್ಲಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಣದಿನವೆಂದು ಘೋಷಿಸಿ, ಮದ್ಯ ಮಾರಾಟ ವನ್ನು ನಿಷೇಧಿಸಿ, ಆದೇಶ ಹೊರಡಿಸಲಾಗಿದೆ.
ಚುನಾವಣಾ ಆಯೋಗದ ಚುನಾವಣಾ ವೇಳಾಪಟ್ಟಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಲು ಅ.31 ಕೊನೆದಿನವಾಗಿದ್ದು, ನಾಮಪತ್ರಗಳನ್ನು ಹಿಂಪಡೆಯಲು ನ.4 ರವರೆಗೆ ಅವಕಾಶವಿದೆ. ಕಾಪು ತಾಲೂಕಿನ ಕಟಪಾಡಿ ಗ್ರಾಪಂ ಹಾಗೂ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಪಂಗಳ ತಲಾ ಒಂದು ಸದಸ್ಯ ಸ್ಥಾನಕ್ಕೆ ತಲಾ ಒಬ್ಬ ಅ್ಯರ್ಥಿಯಿಂದ ಮಾತ್ರ ನಾಮಪತ್ರ ಸ್ವೀಕರಿಸಲಾಗಿದೆ. ಹೀಗಾಗಿ ಇಲ್ಲಿ ಅವಿರೋಧ ಆಯ್ಕೆಯಾಗಿದೆ.
ಆದ್ದರಿಂದ ಕಾಪು ತಾಲೂಕಿನ ಕಟಪಾಡಿ ಗ್ರಾಪಂ ಹಾಗೂ ಕಾರ್ಕಳ ತಾಲೂ ಕಿನ ಕಲ್ಯಾ ಗ್ರಾಪಂಗಳ ಒಂದು ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಗೆ ಅಂತಿಮವಾಗಿ ಕಣದಲ್ಲಿ ಒಬ್ಬ ಅ್ಯರ್ಥಿ ಇರುವುದರಿಂದ ಹಾಗೂ ಈ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯದೇ ಇರುವುದರಿಂದ ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ಅ.24ರಂದು ಮದ್ಯ ಮಾರಾಟ ನಿಷೇಧಿಸಿ ಹೊರಡಿಸಿದ್ದ ಆದೇಶ ವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.