×
Ad

ಪಿಡಿಲೈಟ್‌ನಿಂದ ಟೈಲ್ ಗಮ್ ಬ್ರಾಂಡ್ ರಾಫ್ ಜಾಗೃತಿ ಅಭಿಯಾನ

Update: 2019-11-05 22:17 IST

ಮಂಗಳೂರು, ನ.4: ಹೌಸ್ ಆಫ್ ಪಿಡಿಲೈಟ್‌ನ ಅಗ್ರಗಣ್ಯ ಅಂಟು ಪದಾರ್ಥದ ಬ್ರಾಂಡ್ ಆಗಿರುವ ರಾಫ್ ಬಗ್ಗೆ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ರಾಫ್ ಅಧ್ಯಕ, ದೇಬಾಶಿಶ್ ವನೀಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಅವರು, ‘ರಾಫ್‌ನಲ್ಲಿದೆ ಮೊಸಳೆಯ ಹಿಡಿತ’ ಎಂಬ ತಿರುಳಿನಡಿ ಈ ಅಭಿಯಾನ ನಡೆಯಲಿದೆ ಎಂದರು.

ಟೈಐಲ್ಸ್‌ನ ಬಾಳಿಕೆಯನ್ನು ಖಾತ್ರಿಪಡಿಸಲು ಮತ್ತು ಭವಿಷ್ಯದ ವೆಚ್ಚ ಹಾಗೂ ಹಾನಿಯನ್ನು ತಪ್ಪಿಸಲು ಗ್ರಾಹಕರು ಸೂಕ್ತವಾದ ಅಂಟು ಬಳಸು ವಂತೆ ಇದು ಜಾಗೃತಿಯನ್ನು ಮೂಡಿಸಲಿದೆ. ಮನೆ ಮಾಲಿಕರು ತಮ್ಮ ಮನೆಗಳ ಆಂತರಿಕ ವಿನ್ಯಾಸದ ಸಂದರ್ಭ ಸೂಕ್ತ ಅಂಟು ಉತ್ಪನ್ನಗಳನ್ನು ಬಳಸದಿದ್ದರೆ ಟೈಲ್‌ನಲ್ಲಿ ಬಿರುಕು, ಬಾಗುವಿಕೆ, ಕೆತ್ತುವಿಕೆ ಮತ್ತು ಬಂಧ ಸಡಿಲವಾಗುವಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮನೆಗಳಲ್ಲಿ ಇಂದು ಸೆರಾಮಿಕ್ ಟೈಲ್ಸ್ ಬದಲು ವೆಟ್ರಿಫೈಡ್ ಟೈಲ್, ದೊಡ್ಡ ಗಾತ್ರದ ಟೈಲ್ಸ್, ಸಂಯುಕ್ತ ಕಲ್ಲುಗಳನ್ನು ಬಳಸಲಾಗುತ್ತದೆ. ಗೋಡೆಗಳಿಗೂ ಟೈಲ್ಸ್ ಅಳವಡಿಸಲಾಗುತ್ತದೆ. ಬಹುತೇಕವಾಗಿ ಸಿಮೆಂಟ್ ಬಳಸಿ ಈ ಟೈಲ್ಸ್‌ಗಳನ್ನು ಜೋಡಿಸಲಾಗುತ್ತದೆ. ಆದರೆ ಇದು ಮುಂದೆ ನಾನಾ ರೀತಿಯ ಅನಾಹುತ, ಖರ್ಚು ವೆಚ್ಚಗಳಿಗೆ ಕಾರಣವಾಗುತ್ತದೆ ಎಂದು ಅವರು ವಿವರ ನೀಡಿದರು.

ರಾಫ್‌ನ ರೈನ್ ಬೋ ಟೈಲ್‌ಮೇಟ್ ಎಪೋಕ್ಸಿ ಗ್ರೌಟ್, ಬಿರುಕುಮುಕ್ತ, ನೀರು ನಿರೋಧಕ, ಕಲೆ ಮತ್ತು ರಾಸಾಯನಿಕ ನಿರೋಧಕವಾಗಿದ್ದು, ವಿವಿಧ ಶ್ರೇಣಿಯ ಬಣ್ಣಗಳಲ್ಲಿ ಲಭ್ಯ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಕರ್ನಾಟಕ ವಿಭಾಗದ ಗೌತಮ್ ಹಾಗೂ ಮಂಗಳೂರು ಘಟಕದ ವಿಜಯ್‌ರವರು ಸಿಮೆಂಟ್‌ನಿಂದ ಹಾಗೂ ರಾಫ್ ಬಳಸಿ ಜೋಡಿಸಲಾದ ಟೈಲ್ಸ್‌ಗಳ ವ್ಯತ್ಯಾಸವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News