ನ. 12: ಕಾರ್ಕಳ ತಾಲೂಕು ಆಸ್ಪತ್ರೆ ಉದ್ಘಾಟನೆ

Update: 2019-11-05 17:01 GMT

ಕಾರ್ಕಳ, ನ. 5: ಸಾರ್ವಜನಿಕ ತಾಲೂಕು ಆಸ್ಪತ್ರೆಯ ನೂತನ ಕಟ್ಟಡ ನ. 12ರಂದು ಲೋಕಾರ್ಪಣೆಯಾಗಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಆರೋಗ್ಯ ಸಚಿವ  ಬಿ. ಶ್ರೀರಾಮುಲು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಗೃಹ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಯಿ ಶಸö ಚಿಕಿತ್ಸಾ ವಿಭಾಗವನ್ನು ಉದ್ಘಾಟಿಸಲಿದ್ದು,  ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಹಂತದ ಜನಪ್ರತಿನಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ನ. 5ರಂದು ಪ್ರತಿಕಾಗೋಷ್ಠಿ ಆಯೋಜಿಸಿ ಶಾಸಕರು ಮಾಹಿತಿ ನೀಡಿದರು. 

ಬಡವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹತ್ತಾರು ಸೌಲಭ್ಯದೊಂದಿಗೆ ಕಾರ್ಕಳ ತಾಲೂಕು ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ. ತುರ್ತುಚಿಕಿತ್ಸಾ ವಿಭಾಗ,  ಶಸö ಚಿಕಿತ್ಸಾ, ಪ್ರಯೋಗಶಾಲಾ, ಕ್ಷ ಕಿರಣ, ಹೆರಿಗೆ, ಡಯಾಲಿಸಿಸ್ ವಿಭಾಗ, ನವಜಾತ ಆರೈಕೆ ಘಟಕ, ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರ, ಸಂವಹನ ರಹಿತ ಕಾಯಿಲೆಗಳ ವಿಭಾಗ, ತೀವ್ರ ನಿಗಾ ಘಟಕ, ಸೋನಾಲಜಿ, ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರ, ಔಷಧ ವಿತರಣಾ ಕೇಂದ್ರ, ಶೈತ್ಯಾಗಾರ, ಅಡುಗೆ ಕೋಣೆಯನ್ನು ನೂತನ ಕಟ್ಟಡ ಒಳಗೊಂಡಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ  11 ಮಂದಿ ವೈದ್ಯರ ತಂಡ, 3 ಮಂದಿ ಆಯುಷ್ ಸಿಬ್ಬಂದಿ, 27 ಮಂದಿ ಶುಶ್ರೂಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಪ್ರವಾಸಿ ನಿರೀಕ್ಷಣಾ ಮಂದಿರ

ಕಾರ್ಕಳದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪ್ರವಾಸಿ ನಿರೀಕ್ಷಣಾ ಮಂದಿರವು ಅಂದೇ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕರು ಹೇಳಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾವೀರ ಹೆಗ್ಡೆ, ವಕ್ತಾರ  ಹರೀಶ್ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News