7,000 ಕೋ. ರೂ. ಬ್ಯಾಂಕ್ ವಂಚನೆ ಪ್ರಕರಣ: 15 ರಾಜ್ಯಗಳ 170 ಸ್ಥಳಗಳ ಮೇಲೆ ಸಿಬಿಐ ದಾಳಿ

Update: 2019-11-05 17:16 GMT

 ಹೊಸದಿಲ್ಲಿ, ನ. 5: ಬ್ಯಾಂಕ್ ವಂಚನೆ ಪ್ರಕರಣ ಬೇಧಿಸಲು ದೇಶಾದ್ಯಂತದ ಹೊಸದಿಲ್ಲಿ, ಆಂಧ್ರಪ್ರದೇಶ ಹಾಗೂ ಗುಜರಾತ್ ಸೇರಿದಂತೆ 15 ರಾಜ್ಯಗಳ ಸುಮಾರು 170 ಸ್ಥಳಗಳ ಮೇಲೆ ಸಿಬಿಐ ಮಂಗಳವಾರ ದಾಳಿ ನಡೆಸಿದೆ.

ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ತಿಳಿಸಿದೆ.

7,000 ಕೋಟಿ ರೂಪಾಯಿ ವಂಚನೆಯ 35 ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಸಿಬಿಐಯ ಬ್ಯಾಂಕ್ ವಂಚನೆ ತನಿಖಾ ದಳ ಈ ದಾಳಿ ನಡೆಸಿದೆ. ಆದರೆ, ರಾಷ್ಟ್ರ ವ್ಯಾಪಿಯಲ್ಲಿ ದಾಳಿಗೆ ಗುರಿಯಾಗಿರಿಸಲಾದ ಬ್ಯಾಂಕ್‌ಗಳ ಹೆಸರನ್ನು ಸಿಬಿಐ ಬಹಿರಂಗಪಡಿಸಿಲ್ಲ.

 ಆಂಧ್ರಪ್ರದೇಶ, ಚಂಡಿಗಢ, ದಿಲ್ಲಿ, ಗುಜರಾತ್, ಹರ್ಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಉತ್ತರಾಖಂಡ, ದಾದ್ರ ಹಾಗೂ ನಗರ ಹವೇಲಿಯಲ್ಲಿ ಇರುವ ಬ್ಯಾಂಕ್‌ನ ಹಿರಿಯ ಪದಾಧಿಕಾರಿಗಳ ನಿವಾಸ ಹಾಗೂ ಕಚೇರಿ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಬಿಐಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಕೆಲವು ತಿಂಗಳಿಂದ ಇದೇ ರೀತಿಯ ಹಲವು ದಾಳಿಗಳನ್ನು ಸಿಬಿಐ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News