ಪಡುಬಿದ್ರಿ: ಎಸ್‌ಡಿಪಿಐನಿಂದ ಉಚಿತ ಆಂಬುಲೆನ್ಸ್ ಸೇವೆ

Update: 2019-11-05 17:20 GMT

ಪಡುಬಿದ್ರಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಸ್ಥೆಯ ಕಾಪು ವಿಧಾನ ಸಭಾ ಕ್ಷೇತ್ರ ವಲಯದ ವತಿಯಿಂದ ಸಾರ್ವಜನಿಕರಿ ಗಾಗಿ ಉಚ್ಚಿಲದಲ್ಲಿ ಉಚಿತ ಅಂಬುಲೆನ್ಸ್ ಲೋಕಾರ್ಪಣೆ ಸಮಾರಂಭ ಸೋಮವಾರ ನಡೆಯಿತು. 

ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಯು. ಸೀತಾರಾಂ ಭಟ್ ಮಾತನಾಡಿ, ಜಾತಿ, ಧರ್ಮವು ನಾವು ಮಾಡಿಕೊಂಡ ಚೌಕಟ್ಟು. ಎಲ್ಲಾ ಧರ್ಮದ ಮೂಲ ಸಾರ ಕರುಣೆ, ತಾಳ್ಮೆ, ಸಹನೆಯ ಸಂದೇಶ ನೀಡುತ್ತದೆ. 

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಸ್ಥೆಯ ರಾಷ್ಟ್ರಿಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮಾತನಾಡಿ,  ಪ್ರೀತಿ, ಸಹೋದರತೆ, ಅನ್ಯೋನ್ಯತೆ, ಮಮತೆ, ಶಾಂತಿ, ತ್ಯಾಗಕ್ಕಾಗಿ ಸಂಸ್ಥೆ ಮುಂದಾಗಿದೆ ಎಂದರು. ವೇದಿಕೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಸ್ಥೆಯ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ, ಎರ್ಮಾಳು ಜಾಮಿಶಾ ಮಸೀದಿಯ ಖತೀಬರಾದ ಶಬ್ಬೀರ್ ಫೈಝಿ, ಎರ್ಮಾಳು ಚರ್ಚ್ನ ಧರ್ಮಗುರುಗಳಾದ ಲಾರೆನ್ಸ್ ರಾಡ್ರಿಗಸ್, ಉಡುಪಿ ಜಿಲ್ಲಾ ಹೋಮ್ ಗಾರ್ಡ್ ಕಮಾಂಡೆಂಟ್ ಡಾ. ಪ್ರಶಾಂತ್ ಶೆಟ್ಟಿ, ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಶರ್ಮಿಳಾ ಡಿ. ಸಾಲ್ಯಾನ್, ಮಹಮ್ಮದ್ ಇಕ್ಬಾಲ್, ಮಜೀದ್ ಪೊಲ್ಯ, ಹನೀಫ್ ಮೂಳೂರು, ಅಬ್ರಾರ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News