×
Ad

90 ರೂ.ಗೆ ಏರಿಕೆಯಾದ ಈರುಳ್ಳಿ ಬೆಲೆ

Update: 2019-11-05 22:51 IST

ಹೊಸದಿಲ್ಲಿ, ನ. 4: ಈರುಳ್ಳಿ ಬೆಲೆ ಪ್ರತಿ ಕಿ.ಗ್ರಾಂ.ಗೆ 90 ರೂಪಾಯಿಗೆ ಏರಿಕೆಯಾಗುವ ಮೂಲಕ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದೆ.

ಈರುಳ್ಳಿ ಬೆಲೆ ಕಳೆದ ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಪ್ರತಿ ಕಿ.ಗ್ರಾಂ.ಗೆ 80 ರೂಪಾಯಿಗೆ ಏರಿಕೆಯಾಗಿತ್ತು. ಮಹಾರಾಷ್ಟ್ರದ ಈರುಳ್ಳಿ ಬೆಳೆಯುವ ಪ್ರಮುಖ ಪ್ರದೇಶದಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಬೆಳೆ ಹಾನಿ ಉಂಟಾಗಿ ಈರುಳ್ಳಿ ಕೊರತೆ ಉಂಟಾಗಿದೆ.

 ಲಸಲ್‌ಗಾಂವ್ ಮಾರುಕಟ್ಟೆಯಲ್ಲಿ ಈರುಳ್ಳಿಯ ಸರಾಸರಿ ಬೆಲೆ ಪ್ರತಿ ಕಿ.ಗ್ರಾಂಗೆ 55.50ಕ್ಕೆ ಏರಿಕೆಯಾಗಿದೆ. ನವೆಂಬರ್‌ನಲ್ಲಿ ಸುರಿದ ಅಕಾಲಿಕೆ ಮಳೆಯಿಂದಾಗಿ ಬೆಳೆ ಹಾನಿಯಾಗಿರುವುದರಿಂದ ಈರುಳ್ಳಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಆತಂಕಪಟ್ಟುಕೊಳ್ಳುತ್ತಿದ್ದಾರೆ.

ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಕಳೆದ ಎರಡು ವಾರಗಳ ಕಾಲ ಭಾರೀ ಮಳೆಯಾಗಿದೆ. ಇದರಿಂದ ನಾಸಿಕ್, ಅಹ್ಮದಾಬಾದ್ ಹಾಗೂ ಪುಣೆಯಲ್ಲಿ ಈರುಳ್ಳಿ ಬೆಳೆಗೆ ಗಣನೀಯ ಹಾನಿ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News