ಜೈಲಿನಲ್ಲಿ ತಾಯಂದಿರ ಜೊತೆ ಬೆಳೆಯುತ್ತಿರುವ ಮಕ್ಕಳ ಸಂಖ್ಯೆ 1,600 !

Update: 2019-11-05 17:40 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ತಾಯಂದಿರು ಬಂಧನದಲ್ಲಿ ಇರುವ ಕಾರಣಕ್ಕೆ 2017ರ ವರೆಗೆ 6 ವರ್ಷದ ಒಳಗಿನ 1,600ಕ್ಕೂ ಅಧಿಕ ಮಕ್ಕಳು ವಿವಿಧ ಜೈಲುಗಳಲ್ಲಿ ಕಳೆಯುತ್ತಿದ್ದಾರೆ ಎಂದು ಎನ್‌ಸಿಆರ್‌ಬಿಯ ಇತ್ತೀಚೆಗಿನ ವರದಿ ಬಹಿರಂಗಗೊಳಿಸಿದೆ.

ವಿಚಾರಣಾಧೀನ ಅಥವಾ ವಿವಿಧ ಅಪರಾಧಕ್ಕಾಗಿ ತಾಯಂದಿರು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಕ್ಕಳು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.

6 ವರ್ಷದ ಒಳಗಿನ ಮಕ್ಕಳಿಗೆ ತಾಯಿಯೊಂದಿಗೆ ಜೈಲಿನಲ್ಲಿ ಇರಲು ಅವಕಾಶ ನೀಡಲಾಗಿದೆ.

ಉತ್ತರಪ್ರದೇಶ ಹಾಗೂ ಬಿಹಾರದ ಜೈಲುಗಳಲ್ಲಿ ಅತ್ಯಧಿಕ ಮಕ್ಕಳಿದ್ದಾರೆ. ಉತ್ತರ ಪ್ರದೇಶದಲ್ಲಿ 332 ಮಕ್ಕಳಿದ್ದರೆ, ಬಿಹಾರದಲ್ಲಿ 146 ಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News