ಗಲ್ಫ್ ಗಾಯ್ಸ್ ಸೆಂಟ್ರಲ್ ಕಮಿಟಿ ಮಲ್ಲೂರು ನೂತನ ಅಧ್ಯಕ್ಷರಾಗಿ ಇಕ್ಬಾಲ್ ಮಲ್ಲೂರು ಆಯ್ಕೆ

Update: 2019-11-05 18:16 GMT

ಮಂಗಳೂರು: ವಿದೇಶದಲ್ಲಿ ದುಡಿಯುತ್ತಿರುವ ಮಲ್ಲೂರು, ಬದ್ರಿಯನಗರ, ದೆಮ್ಮಲೆ, ಉದ್ದಬೆಟ್ಟು ಗ್ರಾಮದ  150ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಗಲ್ಫ್ ಗಾಯ್ಸ್ ಸಮಿತಿಯನ್ನು ಮದೀನದಲ್ಲಿ ರಚಿಸಲಾಯಿತು.

ತೀರಾ ಅರ್ಥಿಕ ಸಂಕಷ್ಟಕ್ಕೀಡದವರ ಮದುವೆ, ಮನೆ ಹಾಗೂ ವ್ಯೆದಕೀಯ ಚಿಕಿತ್ಸೆಗಾಗಿ ಮೂರು ವರ್ಷಗಳಿಂದ ಸುಮಾರು 45 ಲಕ್ಷ ರೂ. ನೀಡಲಾಯಿತು.  ಇದರ ನಾಲ್ಕನೇ ವಾರ್ಷಿಕ  2020ರ ಸಾಲಿನ ಮಹಾಸಭೆಯು ಇತ್ತೀಚೆಗೆ ನಡೆಯಿತು.

ಶರೀಫ್ ಮಲ್ಲೂರು ಸಭೆಯನ್ನು ಉದ್ಘಾಟಿಸಿದರು. ಸಲೀಂ ಉದ್ದಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಸಂಶುದ್ದೀನ್ ಬದ್ರಿಯಾನಗರ ಕಿರಾಅತ್ ಪಠಿಸಿದರು. ಯಂ.ಜಿ. ಇಕ್ಬಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುನೀರ್ ಬದ್ರಿಯಾನಗರ ಲೆಕ್ಕ ಪತ್ರ ವರದಿ ಮಂಡಿಸಿದರು.

ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಎಂ.ಐ. ಶರೀಫ್, ಅಧ್ಯಕ್ಷರಾಗಿ ಎಂ.ಜಿ. ಇಕ್ಬಾಲ್ ಮಲ್ಲೂರು, ಉಪಾಧ್ಯಕ್ಷರಾಗಿ ಉಮರ್ ಬೊಲ್ಲಂಕಿಣಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುನೀರ್ ಬದ್ರಿಯಾ ನಗರ, ಕಚೇರಿ ಕಾರ್ಯದರ್ಶಿಯಾಗಿ ಉಸ್ಮಾನ್ ಬಿ.ಎನ್. ಲೆಕ್ಕ ಪರಿಶೋಧಕರಾಗಿ ನವಾಝ್ ಮಲ್ಲೂರು, ಕೋಶಾಧಿಕಾರಿಯಾಗಿ ಅಝೀಝ್ ಬಡ್ಡೂರು, .ಸಲಹೆಗಾರರಾಗಿ ಸತ್ತಾರ್ ದೆಮ್ಮಲೆ, ಹಕೀಂ ಜಿ.ಎ. ಬದ್ರಿಯಾ ನಗರ, ಸಂಚಾಲಕರಾಗಿ ಮುಹಮ್ಮದ್ ಅಲಿ ದೆಮ್ಮಲೆ, ಕಾರ್ಯಕಾರಿ ಸದಸ್ಯರಾಗಿ ಸಲೀಂ ಉದ್ದಬೆಟ್ಟು, ನೌಫಲ್ ಸಿಪಿ ಬದ್ರಿಯಾ ನಗರ, ಪುತ್ತಲಿ ಪಾದೆ, ದಾವೂದ್ ಮಾವಿನಡಿ, ಮಜೀದ್ ಗಂಪ, ಸಾದಿಕ್ ಉಳ್ಳಾಲ್ ಉದ್ದಬೆಟ್ಟು, ದಾವೂದ್ ಮಕ್ಬೂಲ್, ರಫೀಕ್ ಮಾಸ್ಟರ್, ನಿಝಾಮ್ ದೆಮ್ಮಲೆ, ತೌಸೀಫ್ ದೊಂಪ, ಸಿಯಾಝ್ ಉದ್ದಬೆಟ್ಟು ಹಾಗು 130 ಸದಸ್ಯರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News